spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಎಎ ಮತ್ತು ಎನ್ ಆರ್ ಸಿ ಬೆಂಬಲಿಸಿ ಸರಸಂಘಚಾಲಕರ ಮಾತು: ಪ್ರಜಾಪ್ರಭುತ್ವ, ಬಹುತ್ವಗಳನ್ನು ಭಾರತ ಬೇರೆಯವರಿಂದ ಕಲಿಯಬೇಕಿಲ್ಲ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪಂಥ ನಿರಪೇಕ್ಷತೆ, ಪ್ರಜಾಪ್ರಭುತ್ವ, ಬಹುತ್ವ ಇವೆಲ್ಲವೂ ಭಾರತೀಯರಲ್ಲಿ ಪರಂಪರಾಗತವಾಗಿಯೇ ಮೈಗೂಡಿರುವ ಅಂಶಗಳಾದ್ದರಿಂದ ನಾವು ಎಲ್ಲರನ್ನೂ ಒಳಗೊಳ್ಳುವಿಕೆಯ ಬಗ್ಗೆ ಬೇರೆ ದೇಶಗಳಿಂದ ಕಲಿಯಬೇಕಾಗಿರುವುದು ಏನಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ ಭಾಗ್ವತ್ ಅವರು ಗುವಾಹಟಿಯಲ್ಲಿ ಹೇಳಿದ್ದಾರೆ.
‘ಡಿಬೇಟ್ ಒವರ್ ಎನ್ ಆರ್ ಸಿ ಆ್ಯಂಡ್ ಸಿಎಎ- ಅಸ್ಸಾಂ ಆ್ಯಂಡ್ ದ ಪಾಲಿಟಿಕ್ಸ್ ಆಫ್ ಹಿಸ್ಟರಿ’ ಕೃತಿ ಬಿಡುಗಡೆಯಲ್ಲಿ ಅವರು ಹೇಳಿದ ಮಾತುಗಳಿವು.
ಇತರರನ್ನು ನಮ್ಮೊಳಗೆ ಬೆರೆಸಿಕೊಳ್ಳುವ ಮಾರ್ಗವನ್ನು ನಾವು ಹಿಡಿಯಬೇಕು ನಿಜ. ಆದರೆ ಅದು ನಮ್ಮದೇ ಜನರಿಗೆ ಭವಿಷ್ಯದಲ್ಲಿ ಅಪಾಯ ತಂದೊಡ್ಡಬಾರದು. ಹೊರಗಿನಿಂದ ಬಂದು ನೆಲೆಯೂರಿದವರೇ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಂಡು ಚುನಾವಣಾ ರಾಜಕೀಯವೂ ಸೇರಿದಂತೆ ಎಲ್ಲವನ್ನೂ ನಿರ್ಧರಿಸುವ ಹಂತಕ್ಕೆ ಹೋಗುತ್ತಾರೆ ಎಂದಾದರೆ ಸಹಜವಾಗಿಯೇ ಮೂಲ ಜನರಿಗೆ ಆತಂಕ ಎದುರಾಗುತ್ತದೆ ಎಂದವರು ವಿಶ್ಲೇಷಿಸಿದರು.
ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಡಾ. ಮೋಹನ ಭಾಗ್ವತ್ ನಿಲುವು ಹೀಗೆ ವ್ಯಕ್ತವಾಯಿತು- “ಸ್ವಾತಂತ್ರ್ಯಾನಂತರ ಭಾರತವು ತನ್ನ ಅಲ್ಪಸಂಖ್ಯಾತ ಸಮುದಾಯವನ್ನು ವಿಶ್ವಾಸದಿಂದ ನಡೆಸಿಕೊಂಡಿತು, ಅವರ ಹಕ್ಕುಗಳನ್ನು ರಕ್ಷಿಸಿತು. ಆದರೆ ಅದು ಪಾಕಿಸ್ತಾನದ ಕಡೆಯಿಂದ ಆಗಲಿಲ್ಲ. ಹೀಗಾಗಿಯೇ ನಾಗರಿಕತ್ವದ ಕಾನೂನು ತಿದ್ದುಪಡಿ ಮೂಲಕ ಅಲ್ಲಿ ದೌರ್ದನ್ಯಕ್ಕೊಳಗಾದ ನಿರಾಶ್ರಿತರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸಿಎಎ ಕಾಯ್ದೆ ಭಾರತೀಯ ಮುಸ್ಲಿಮರಿಗೆ ಯಾವ ಹಾನಿಯನ್ನೂ ಉಂಟುಮಾಡುತ್ತಿಲ್ಲ. ಇನ್ನು ರಾಷ್ಟ್ರೀಯ ನಾಗರಿಕ ದಾಖಲೆ (ಎನ್ ಆರ್ ಸಿ)ಬಗ್ಗೆ ಹೇಳುವುದಾದರೆ, ಪ್ರತೀ ದೇಶವೂ ತನ್ನ ಕಾನೂನುಬದ್ಧ ಪ್ರಜೆಗಳ್ಯಾರು ಎಂಬುದನ್ನು ನಿರ್ಧರಿಸಿಯೇ ನಿರ್ಧರಿಸುತ್ತದೆ.”

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss