ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟೀ ಜೊತೆ ಸವಿಯಿರಿ ಕ್ಯಾಬೇಜ್ ಆಲೂ ಪಕೋಡ.. ಮಾಡುವುದಕ್ಕೂ ಈಸಿ, ತಿನ್ನುವುದಕ್ಕೂ ರುಚಿ

ಸಾಯಂಕಾಲ ಹಾಗೇ ಟೀ ಕುಡಿಯುವ ಬದಲು ಟೀ ಜೊತೆ ಪಕೋಡ ಇದ್ರೆ ಎಂಥ ಸೂಪರ್ ಸಾಯಂಕಾಲ ಅಲ್ವಾ? ಆದರೆ ಒಂದೇ ರೀತಿ ಪಕೋಡ ತಿಂದು ಅಥವಾ ಮಾಡಿ ನಿಮಗೂ ಬೇಸರವಾಗಿರುತ್ತದೆ. ಬೇರೆ, ಬೇರೆ ಏನಾದ್ರೂ ಮಾಡೋಣ ಅನಿಸುತ್ತದೆ. ಆದರೆ ಏನ್ ಮಾಡೋದು? ಕ್ಯಾಬೇಜ್ ಆಲೂ ಪಕೋಡ ಮಾಡಿ.

ಬೇಕಾಗುವ ಸಾಮಗ್ರಿ:

ತುರಿದ ಆಲೂಗಡ್ಡೆ-1
ಕ್ಯಾಬೇಜ್ ಚಿಕ್ಕ ದಾಗಿ ಕಟ್ ಮಾಡಿದ 3/4 ಕಪ್.
ಉಪ್ಪು ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ 1 ಚಮಚ
ಓಂ ಕಾಳು 1/4 ಚಮಚ
ಅರಸಿನ ಪುಡಿ 1/2 ಚಮಚ
ಕೊತ್ತಂಬರಿ ಸೊಪ್ಪು
ಕರಿಬೇವಿನ ಸೊಪ್ಪು
ಕಡಲೆ ಹಿಟ್ಟು 1 ಕಪ್
ಅಕ್ಕಿ ಹಿಟ್ಟು 4 ಚಮಚ.

ಮಾಡುವ ವಿಧಾನ:

ತುರಿದ ಆಲೂಗಡ್ಡೆ, ಕಟ್ ಮಾಡಿದ ಕ್ಯಾಬೇಜ್ ಒಂದು ಪಾತ್ರೆಗೆ ಹಾಕಿ.
ಇದಕ್ಕ, ಉಪ್ಪು, ಮೆಣಸಿನ ಪುಡಿ, ಅರಸಿನ ಪುಡಿ, ಓಂ ಕಾಳು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
10 ನಿಮಿಷ ಹಾಗೆ ಬಿಡಿ.
ನಂತರ ಕಡಲೆ ಹಿಡ್ಡು, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗಟ್ಟಿ ಕಲೆಸಿ.
ಸ್ವಲ್ಪ ತೆಗೆದು ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss