ವರಿಷ್ಠರು ಸೂಚಿಸಿದರೆ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಕೇಂದ್ರ ವರಿಷ್ಠರು ಸೂಚಿಸಿದರೆ ಸಚಿವ ಸಂಪುಟ ವಿಸ್ತರೆ ಮತ್ತು ಪುನರಚನೆ ಮಾಡಲಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ಘೋಷಿಣೆ ಮಾಡಲಾಗಿದೆ. ಆದರಿಂದ ಪಕ್ಷ ವಿಧಾನ ಪರಿಷತ್ ಮತ್ತು ರಾಜ್ಯ ಸಭಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ವರಿಷ್ಠರು ಸಹ ಎಲ್ಲವನ್ನು ಗಮನಿಸುತ್ತಿದ್ದಾರೆ. ಮತ್ತೊಮ್ಮೆ ಸಂಪುಟ ವಿಸ್ತರಣೆ ಬಗ್ಗೆ ಸಂಪರ್ಕ ಮಾಡಿ ಮಾತನಾಡಿ ಮುಂದಿನ‌ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಸರ್ಕಾರ ಸೌಹಾರ್ದತೆಯಿಂದ ಬಗೆ ಹರಿಸಿದ್ದೇವೆ. ಹಿಜಾಬ್, ಹಲಾಲ ಕಟ್ಟ, ಆಜಾನ್ ಸಮಸ್ಯೆ ನ್ಯಾಯ ಸಮ್ಮತವಾಗಿ ಪರಿಹರಿಸಲಾಗಿದೆ. ಅತ್ಯಂತ ದಕ್ಷವಾಗಿ ಆಡಳಿತ ನಡೆಸಿದ್ದೇವೆ ಎಂದು ತಿಳಿಸಿದರು.

ಹಳೆ ಮೈಸೂರ ಭಾಗದಲ್ಲಿ ಆಪರೇಷನ್ ಕಮಲ ಮಾಡುತ್ತೇವೆ ಎಂದು ಎಸ್.ಟಿ. ಸೋಮಶೇಖರ ಮತ್ತು ಜೆಡಿಎಸ್ ನ ಮುಖಂಡ ಜಿ.ಟಿ. ದೇವೆಗೌಡರನ್ನು ಭೇಟಿಯಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಬದಲಾವಣೆಗಳು ಸಹಜ ಎಂದರು.

ವಿಜೇಂದ್ರ ಅವರಿಗೆ ಎಂಎಲ್ ಸಿ ಮಾಡಿ ಮಂತ್ರಿ ಮಾಡಬೇಕು ಎಂಬ ಪ್ರಶ್ನೆ, ಹೈಕಮಾಂಡಗೆ ಬಿಟ್ಟಿದ್ದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!