ಹೊಸದಿಗಂತ ವರದಿ, ಹುಬ್ಬಳ್ಳಿ:
ಸಚಿವ ಸಂಪುಟ ಸಭೆ ನ.8 ರಂದು ಆಯೋಜಿಸಲಾಗಿದೆ. ಸಭೆಯಲ್ಲಿ ಮುಂದಿನ ಅಧಿವೇಶನದ ಯಾವಾಗ ನಡೆಸಬೇಕು ಎಂದು ತೀರ್ಮಾನಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಭತ್ತ ಬೆಳೆಯುವ ಪ್ರಮುಖ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಬಾಗಲಕೋಟ ಮತ್ತು ಯಾದಗಿರಿಯ ಕೃಷ್ಣ, ಕಾವೇರಿ ಜಲಾನಯನ ಪ್ರದೇಶ ಮತ್ತು ಕರಾವಳಿಯ ಭಾಗದ ರೈತರು ಬೆಂಬಲ ಬೆಲೆಗೆ ಭತ್ತ ತೆಗೆದುಕೊಳ್ಳಬೇಕು ಎಂದು ಬೇಡಿಕೆಯಿತ್ತು. ಆದರಿಂದ ಸರ್ಕಾರ ರೈತರು ಬೆಳೆದ ಭತ್ತವನ್ನು ಉತ್ತಮ ಬೆಂಬಲ ಬೆಲೆಗೆ ತೆಗೆದುಕೊಳ್ಳು ನಿರ್ಧಾರಿಸಿದೆ ಆದರಿಂದ ಅಧಿಕಾರಿಗಳಿ ಸೂಚಿಸಲಾಗಿದೆ. ದೀಪಾವಳಿ ಹಬ್ಬವಾದ ನಂತರ ರೈತರಿಂದ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಗೋವಿನ ಜೋಳದ ಬೆಂಬಲ ಬೆಳೆಯ ಬಗ್ಗೆ ಮಾಧ್ಯಮದವರ ಪ್ರಶ್ನೆ ಗೋವಿನ ಜೋಳ ಕ್ಯಾಬಿನೆಟ್ ಸಮಿತಿ ಇದೆ ಆದರಿಂದ ಇದರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಾಗುವುದಿಲ್ಲ. ಆದರೆ ಭತ್ತ ವಿಚಾರ ಸರ್ಕಾರ ನೇರವಾಗಿ ಕ್ರಮ ಕೈಗೊಳ್ಳುವುದು ಇರುವುದರಿಂದ ತೀರ್ಮಾನಿ
ಸಲಾಗಿದೆ ಎಂದರು.