spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕ್ಯಾಡ್ಬರೀಸ್ ಚಾಕ್ಲೇಟ್ ರಿಮೇಕ್ ಜಾಹೀರಾತು ಎಲ್ಲರಿಗೂ ಸ್ವೀಟ್ ಅನ್ನಿಸ್ತಿರೋದೇಕೆ?

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಚಾಕಲೇಟ್ ಪ್ರಿಯರ ಹಾಟ್ ಫೇವರೇಟ್ ಕ್ಯಾಡ್ ಬರಿಯ 1990ರ ದಶಕದ ಜಾಹಿರಾತು ನಿಮಗೆ ನೆನಪಿದೆಯಾ?
ಫ್ಲೋರಲ್ ಪ್ರಿಂಟ್  ಉಡುಪನ್ನು ಧರಿಸಿದ ಯುವತಿಯೊಬ್ಬಳು ಮೈದಾನದಲ್ಲಿ ನಡೆಯುತ್ತಿರುವ  ಕ್ರಿಕೆಟ್ ಪಂದ್ಯ ನೋಡುತ್ತ ಕ್ಯಾಡ್ ಬರಿ ತಿನ್ನುತ್ತ ಕುಳಿತಿರುತ್ತಾಳೆ.

ಆಕೆಯ ಗೆಳೆಯನಾಗಿರೋ ಕ್ರಿಕೆಟಿಗ ಪಂದ್ಯದಲ್ಲಿ ಗೆದ್ದಾಗ, ಆಕೆ ಅದನ್ನು ಸಂಭ್ರಮಿಸಲು  ಸೆಕ್ಯುರಿಟಿಯನ್ನು ತಳ್ಳಿಕೊಂಡು ಮೈದಾನಕ್ಕೆ ಬರುತ್ತಾಳೆ. ‘ ಬದುಕಿನ ನಿಜವಾದ ಸ್ವಾದವಿದು’ ಎಂಬ ಟಾಗ್ ಲೈನ್ ನಲ್ಲಿ  ಕ್ಯಾಡ್ ಬರಿಯ ಈ ಜಾಹಿರಾತು ಪ್ಲೇ ಆಗುತ್ತದೆ.

ಇದೀಗ ಮತ್ತೆ ಇದೇ ಜಾಹಿರಾತನ್ನು ಕ್ಯಾಡ್ ಬರಿ  ಮರುರೂಪಿಸಿದ್ದು, ಟ್ವಿಟರ್ ನಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ 72  ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಸಾವಿರಾರು ಜನ ಈ ಹೊಸ ಜಾಹಿರಾತನ್ನು ಮೆಚ್ಚಿಕೊಂಡಿದ್ದು, ಕಮೆಂಟ್ಸ್ ಸುರಿಮಳೆ ಸುರಿಸಿದ್ದಾರೆ.

 ಏನಿದೇ ನೂತನ ಜಾಹಿರಾತಿನಲ್ಲಿ?

ಮರುರೂಪಿಸಿದ ಈ ಜಾಹಿರಾತಿನಲ್ಲಿ ಯುವತಿ ಕ್ರಿಕೆಟ್ ಆಡುತ್ತಿರುತ್ತಾಳೆ. ಆಕೆ ಗೆಳಯ ಪಂದ್ಯವನ್ನು ಕ್ಯಾಡ್ ಬರಿ  ತಿನ್ನುತ್ತ ನೋಡುತ್ತಿರುತ್ತಾನೆ. ಆಕೆ ಸಿಕ್ಸ್ ಬಾರಿಸಿ ಗೆದ್ದಾಗ ಅವನು ಸಂಭ್ರಮದಿಂದ ಡ್ಯಾನ್ಸ್ ಮಾಡುತ್ತಾ, ಸೆಕ್ಯುರಿಟಿಯನ್ನು ತಳ್ಳಿಕೊಂಡು ಮೈದಾನಕ್ಕೆ ಬರುತ್ತಾನೆ. ಇಬ್ಬರು ಕ್ಯಾಡ್ ಬರಿ   ತಿಂದು ಸಂಭ್ರಮಿಸುತ್ತಾರೆ.

ಈ ಮೂಲಕ ಕ್ಯಾಡ್ ಬರಿ  ಕ್ರಿಕೆಟ್ ಕೇವಲ ಪುರುಷರ ಗೇಮ್ ಎಂಬ ಹಲವರ ತಪ್ಪು ಗ್ರಹಿಕೆಯನ್ನು ಬದಲಾಯಿಸಿದೆ.  ಮಕ್ಕಳು ಮಾತ್ರವಲ್ಲ ದೊಡ್ಡವರೂ ಕೂಡ ಪ್ರತಿ ಖುಷಿಯನ್ನು ಚಾಕಲೇಟ್ ತಿಂದು ಸಂಭ್ರಮಿಸ ಬೇಕು ಎಂಬುದನ್ನು ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss