Thursday, August 11, 2022

Latest Posts

ಚೀನಾ ರಫ್ತುದಾರರಿಗೆ ದೀಪಾವಳಿಯಲ್ಲಿ 50 ಸಾವಿರ ಕೋಟಿ ರೂ. ನಷ್ಟ: ಸಿಎಐಟಿ ಸಮೀಕ್ಷೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಸಮಯದಲ್ಲಿ ಚೀನಾ ವ್ಯಾಪಾರಿಗಳು 50 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದಾರೆ ಎಂದು ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಅಂದಾಜಿಸಿದೆ.

ದೀಪಾವಳಿ ವಸ್ತುಗಳ ಆಮದಿನ ವಿಚಾರವಾಗಿ ಸುಮಾರು 20 ವಿತರಣಾ ನಗರಗಳಲ್ಲಿ ಸಂಶೋಧನಾ ವಿಭಾಗವು ಸಮೀಕ್ಷೆ ನಡೆಸಿತ್ತು. ಚೀನಾಗೆ ಭಾರತೀಯ ವ್ಯಾಪಾರಿಗಳು ಅಥವಾ ಆಮದುದಾರರು ದೀಪಾವಳಿ ಸರಕುಗಳು, ಪಟಾಕಿಗಳು ಅಥವಾ ಇತರ ವಸ್ತುಗಳನ್ನು ನೀಡಿಲ್ಲ” ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾಹಿರಿ ನೀಡಿದ್ದಾರೆ.

ರಾಂಚಿ, ಗುವಾಹಟಿ, ಪಾಟ್ನಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮಧುರೈ, ನವದೆಹಲಿ, ಅಹಮದಾಬಾದ್, ಮುಂಬೈ, ನಾಗ್ಪುರ, ಜೈಪುರ, ಲಖನೌ, ಚಂಡೀಗಢ, ರಾಯ್‌ಪುರ, ಭುವನೇಶ್ವರ, ಕೋಲ್ಕತ್ತಾ,  ಪುದುಚೇರಿ, ಭೋಪಾಲ್ ಮತ್ತು ಜಮ್ಮುವಿನಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಕಳೆದ ವರ್ಷದಂತೆ ಈ ವರ್ಷವೂ ಸಿಎಐಟಿ ಚೀನಿ ಸರಕುಗಳನ್ನು ಬಹಿಷ್ಕರಿಸಲು ಕರೆ ನೀಡಿದೆ. ಭಾರತೀಯ ವ್ಯಾಪಾರಿಗಳಿಂದ ಚೀನಾದ ಸರಕುಗಳ ಆಮದು ನಿಲ್ಲಿಸುವ ವಿಷಯದಲ್ಲಿ ಚೀನಾ ಸುಮಾರು 50,000 ಕೋಟಿ ರೂ. ವ್ಯಾಪಾರ ನಷ್ಟವನ್ನು ಅನುಭವಿಸಲಿದೆ ಎಂಬುದು ಸಿಎಐಟಿ ಅಂದಾಜಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss