ಕಾಂಬೋಡಿಯಾ ಪ್ರಧಾನಿಗೆ ಕೊರೊನಾ ಪಾಸಿಟಿವ್:‌ ಜಿ 20 ಶೃಂಗಸಭೆಗೆ ಗೈರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗಸಭೆ ಬಳಿಕ ಕಾಂಬೋಡಿಯಾ ಪ್ರಧಾನಿ ಹನ್ ಸೇನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಮಂಗಳವಾರ ಕೋವಿಡ್ -19 ಪರೀಕ್ಷೆ ನಡೆಸಿದ್ದು, ವರದಿ ಧನಾತ್ಮಕವಾಗಿ ಬಂದಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಜಿ 20 ಶೃಂಗಸಭೆಗಾಗಿ ಇಂಡೋನೇಷ್ಯಾಕ್ಕೆ ಆಗಮಿಸಿದ ನಂತರ ಅವರು ಕೊರೊನಾ ಪಾಸಿಟಿವ್‌ ಆಗಿರುವುದನ್ನು  ಬಹಿರಂಗಪಡಿಸಿದರು.

ಕೊರೊನಾ ಪಾಸಿಟಿವ್‌ ಹಿನ್ನೆಲೆ ಮಂಗಳವಾರ ಸಂಜೆ ಕಾಂಬೋಡಿಯಾಕ್ಕೆ ಮರಳಲು ಯೋಜಿಸಿರುವುದಾಗಿ ಪ್ರಧಾನ ಮಂತ್ರಿ ಹೇಳಿದರು.
ನವೆಂಬರ್ 10 ರಿಂದ 13 ರವರೆಗೆ ನೋಮ್ ಪೆನ್‌ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯ ಮುಕ್ತಾಯದ ಎರಡು ದಿನಗಳ ನಂತರ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿದಿದೆ.

ಈ ಆಸಿಯಾನ್ ಶೃಂಗಸಭೆಯಲ್ಲಿ ಭಾರತದ ಕಡೆಯಿಂದ, ಉಪರಾಷ್ಟ್ರಪತಿ ಜಗದೀಪ್ ಧನ್‌ಖರ್, ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಜೊತೆಗಿದ್ದರು. ಉಪರಾಷ್ಟ್ರಪತಿಯವರ ಪ್ರಸ್ತುತ ಸಾಮರ್ಥ್ಯದಲ್ಲಿ ಇದು ಮೊದಲ ವಿದೇಶಿ ಭೇಟಿಯಾಗಿತ್ತು. ASEAN ನ ಪ್ರಸ್ತುತ ಅಧ್ಯಕ್ಷರಾಗಿ ಕಾಂಬೋಡಿಯಾ ಈ ಶೃಂಗಸಭೆಗಳನ್ನು ಆಯೋಜಿಸಿತ್ತು. ಇಲ್ಲಿನ ಪ್ರಧಾನಿಯವರಿಗೇ ಕೊರೊನಾ ಪಾಸಿಟಿವ್‌ ಆಗಿರುವುದರಿಂದ ಜಾಗತಿಕ ನಾಯಕರ ಆರೋಗ್ಯದ ಕುರಿತು ಜಾಗೃತೆ ವಹಿಸಬೇಕಾಗಿದೆ.

ಈ ವರ್ಷ ಆಸಿಯಾನ್-ಭಾರತ ಸಂಬಂಧಕ್ಕೆ 30ವರ್ಷಗಳಾಗಿದ್ದು, ಆಸಿಯಾನ್-ಭಾರತ ಸ್ನೇಹ ವರ್ಷ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಿಯೆಮ್ ರೀಪ್‌ನಲ್ಲಿರುವ ತಾ ಪ್ರೋಮ್ ದೇವಾಲಯ ಮತ್ತು ಐತಿಹಾಸಿಕ ಅಂಕೋರ್ ವಾಟ್ ದೇವಾಲಯಕ್ಕೆ ಭಾರತದ ನಾಯಕರು ಭೇಟಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!