Tuesday, August 16, 2022

Latest Posts

ನನ್ನಂಥ ಹಿರಿಯ ನಾಯಕನನ್ನು​ ಹೀಗೆ ಅವಮಾನಯುತವಾಗಿ ನಡೆಸಿಕೊಳ್ಳಬಹುದೇ?: ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಮರಿಂದರ್ ಸಿಂಗ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್​ ಪಕ್ಷದ ಮೇಲೆಯೇ ಮುನಿಸಿಕೊಂಡಿದ್ದು, ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನೇತ್​ ಮತ್ತು ಪಂಜಾಬ್​ ಕಾಂಗ್ರೆಸ್​ ಪ್ರದೇಶ ಸಮಿತಿ ಮುಖ್ಯಸ್ಥ ನವಜೋತ್​ ಸಿಂಗ್​ ಮತ್ತು ಇಡೀ ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ.
‘ರಾಜಕಾರಣದಲ್ಲಿ ಸಿಟ್ಟಿಗೆ ಅವಕಾಶ ಇಲ್ಲ. ಕೋಪ ಮಾಡಿಕೊಂಡರೆ ನಡೆಯುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಕಾಂಗ್ರೆಸ್​​ನಂಥ ಹಳೆಯ ಮತ್ತು ದೊಡ್ಡ ಪಕ್ಷದಲ್ಲಿ ಅವಮಾನ, ಅಗೌರವಕ್ಕೆ ಅವಕಾಶ ಇದೆಯೇ? ನನ್ನಂಥ ಹಿರಿಯ ನಾಯಕನನ್ನು ಕಾಂಗ್ರೆಸ್​ ಹೀಗೆ ಅವಮಾನಯುತವಾಗಿ ನಡೆಸಿಕೊಳ್ಳಬಹುದೇ? ನನಗೇ ಹೀಗಾದರೆ, ಕಾರ್ಯಕರ್ತರು ಏನೆಲ್ಲ ಅನುಭವಿಸಬೇಕಾಗಬಹುದು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮರಿಂದರ್ ಸಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುಪ್ರಿಯಾ ಶ್ರೀನೇತ್​, ರಾಜಕಾರಣದಲ್ಲಿ ಸಿಟ್ಟು, ಅಸೂಯೆ, ವೈರತ್ವ, ವೈಯಕ್ತಿಕ ಟೀಕೆ, ದ್ವೇಷಗಳಿಗೆ ಅವಕಾಶ ಇಲ್ಲ. ಅವರು ಹುದ್ದೆ ಬಿಡುವುದಾದರೆ ಬಿಡಲಿ. ಆ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ. ವಯಸ್ಸಾದವರು ಹೀಗೆ ಸದಾ ಕೋಪಗೊಳ್ಳುತ್ತಾರೆ ಮತ್ತು ಏನೇನನ್ನೋ ಹೇಳುತ್ತಾರೆ. ಹಾಗೇ. ನಾವು ಅಮರಿಂದರ್​ ಸಿಂಗ್​ ಸಿಟ್ಟು, ವಯಸ್ಸು, ಅನುಭವಕ್ಕೆ ಗೌರವ ಕೊಡುತ್ತೇವೆ. ಕಾಂಗ್ರೆಸ್​ ಅವರನ್ನು 9 ವರ್ಷದ 9 ತಿಂಗಳುಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಿದೆ’ ಎಂದು ಹೇಳಿದ್ದರು.
ಪಂಜಾಬ್​​ನಲ್ಲಿ ವಿಧಾನಸಭೆ ಹತ್ತಿರ ಬರುತ್ತಿರುವಾಗಲೇ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಮತ್ತು ಪಿಸಿಸಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಬಹುಕಾಲದ ಜಗಳಕ್ಕೆ ಪರಿಹಾರವಾಗಿ ಅಮರಿಂದರ್ ಸಿಂಗ್​ ಅವರೇ ಹುದ್ದೆಯಿಂದ ಕೆಳಗಿಳಿಯುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss