Sunday, April 11, 2021

Latest Posts

ಪಿರಿಯಡ್ಸ್ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾ?

ಪಿರಿಯಡ್ಸ್ ಹಾಗೂ ಸೆಕ್ಸ್ ವಿಚಾರವನ್ನು ಓಪನ್ ಆಗಿ ಮಾತನಾಡಲು ಹಲವರು ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ವಿಚಾರಗಳ ಅನುಭವ ಆಗುತ್ತಿದ್ದಂತೆ ತಿಳಿದುಕೊಳ್ಳುವುದು ಅನಿವಾರ್ಯ ಆಗುತ್ತದೆ. ಮುಜುಗರ ಪಡದೇ ಎಲ್ಲವೂ ನಾರ್ಮಲ್ ಎಂದುಕೊಂಡರೆ ಅದು ನಾರ್ಮಲ್ ಆಗಿಯೇ ಕಾಣುತ್ತದೆ. ಇಂಥದ್ದೇ ಒಂದು ಪ್ರಶ್ನೆ ಪಿರಿಯಡ್ಸ್ ಸಮಯದಲ್ಲಿ ಲೈಂಗಿಕೆ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾ? ತುಂಬ ಜನರಿಗೆ ಅನುಮಾನ ಇದ್ದರೂ ಯಾರನ್ನೂ ಕೇಳಲು ಹೋಗುವುದಿಲ್ಲ.. ಆದರೆ ಇದಕ್ಕೆ ಉತ್ತರ ಇಲ್ಲಿದೆ.
ಪಿರಿಯಡ್ಸ್ ಸಮಯದಲ್ಲಿ ಖಂಡಿತಾ ಸೆಕ್ಸ್‌ಗೆ ಅವಕಾಶ ಇದೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಪಿರಿಯಡ್ಸ್‌ನ ಮೊದಲನೆ ದಿನವಾದರೂ ಆಗಬಹುದು, ಕೊನೆ ದಿನವಾದರೂ ಆಗಬಹುದು ಯಾವಾಗಲೂ ಲೈಂಗಿಕೆ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು.ಪಿರಿಯಡ್ಸ್ ಸಮಯದಲ್ಲಿ ಆಗುವ ಹೊಟ್ಟೆ ನೋವು ಕೂಡ ಸೆಕ್ಸ್‌ನಿಂದ ಕಡಿಮೆ ಆಗುತ್ತದೆ. ಆದರೆ ಪಿರಿಯಡ್ಸ್‌ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ಪ್ರೆಗ್ನೆಂಟ್ ಆಗೋದಿಲ್ಲ ಎಂದುಕೊಂಡಿದ್ದರೆ ಅದು ತಪ್ಪು. ಇಲ್ಲಿ ಕೂಡ ನೀವು ಗರ್ಭಿಣಿ ಆಗುವ ಸಾಧ್ಯತೆ ಇದೆ. ಬರ್ಥ್ ಕಂಟ್ರೋಲ್ ಮೆಥಡ್ಸ್ ಬಳಸುವುದು ಸೂಕ್ತ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss