Wednesday, August 17, 2022

Latest Posts

ದುಡ್ಡು ಚೆಲ್ಲಿ ತ್ವರಿತವಾಗಿ ಲಸಿಕೆ ತಂದು ಬಿಡಬಹುದೇ? ಇಲ್ಲಿದೆ ವಾಸ್ತವ ಚಿತ್ರಣ…

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

“ವ್ಯಾಕ್ಸಿನ್ ಉತ್ಪಾದಕರ ಜತೆ ನೇರವಾಗಿ ಒಪ್ಪಂದಕ್ಕಿಳಿದು ಲಸಿಕೆ ತರುವುದಕ್ಕೆ ಕಾಂಗ್ರೆಸ್ಸಿಗೆ ಅನುಮತಿ ನೀಡಲಿ. ಯಡಿಯೂರಪ್ಪ ಮತ್ತು ಮೋದಿಯವರಿಗಾಗದ್ದನ್ನು ನಾವು ಮಾಡುತ್ತೇವೆ” ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಹಲವು ದಿನಗಳಿಂದ ರಾಷ್ಟ್ರಮಟ್ಟದಲ್ಲಿ ಲಸಿಕೆ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ತ್ವರಿತ ಕ್ರಮಕ್ಕೆ ಆಗ್ರಹಗಳು ಬರುತ್ತಿವೆ. ಇವೆಲ್ಲವೂ ಜನರಿಗೆ ನೀಡುತ್ತಿರುವ ಗ್ರಹಿಕೆ ಎಂದರೆ – “ಜಗತ್ತಿನಲ್ಲಿ ನಾನಾ ಕಂಪನಿಗಳಿಂದ ಬೇಕಾದಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಿದೆ, ಆದರೆ ಸರ್ಕಾರದಿಂದ ಖರೀದಿಗೆ ವಿಳಂಬವಾಗುತ್ತಿದೆ” ಎಂಬಂತಿದೆ.
ಆದರೆ ವಾಸ್ತವವೇನು? ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕದ ಎಫ್ಡಿಎ ಅನುಮತಿ ಪಡೆದಿರುವ ಯಾವುದೇ ಲಸಿಕೆಗಳನ್ನು ರಾಜ್ಯ ಸರ್ಕಾರಗಳು ಜಾಗತಿಕ ಟೆಂಡರ್ ಅಡಿಯಲ್ಲಿ ಪಡೆಯಬಹುದು ಎಂದು ಕೇಂದ್ರ ಅದಾಗಲೇ ಅನುಮತಿ ನೀಡಿದೆ. ಅಷ್ಟುಮಾತ್ರಕ್ಕೆ ವಿದೇಶಿ ಕಂಪನಿಗಳೆಲ್ಲ ಲಸಿಕೆ ಕೊಡುವಂತಾಗಿದ್ದರೆ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳು ಇಷ್ಟರಲ್ಲಾಗಲೇ ಲಸಿಕೆ ಖರೀದಿಸಿ ಬೀಗಬಹುದಿತ್ತು. ಕಾಂಗ್ರೆಸ್ ಬೆಂಬಲಿತ ಸರ್ಕಾರವಿರುವ ಮಹಾರಾಷ್ಟ್ರ ಗ್ಲೋಬಲ್ ಟೆಂಡರ್ ಕೊಟ್ಟಿದೆಯಾದರೂ ನಂತರ ಯಾವುದೇ ಪ್ರಗತಿ ಆಗಿಲ್ಲ.
ವಾಸ್ತವ ಏನೆಂದರೆ, ಡಿಸೆಂಬರಿನಲ್ಲಿಯೇ ಒಪ್ಪಂದ ಮಾಡಿಕೊಂಡಿದ್ದ ಅನೇಕ ಲಸಿಕೆ ಕಂಪನಿಗಳು ಸಹ ಸಮಯಕ್ಕೆ ತಕ್ಕಂತೆ ಲಸಿಕೆ ಪೂರೈಸುವುದರಲ್ಲಿ ಹಿಂದೆ ಬಿದ್ದಿರುವ ವಿದ್ಯಮಾನಗಳು ಪಾಶ್ಚಾತ್ಯ ರಾಷ್ಟ್ರಗಳಿಂದ ಸಾಕಷ್ಟು ಸಂಖ್ಯೆಯಲ್ಲೇ ವರದಿಯಾಗಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಮತ್ತು ಶೀರ್ಷಿಕೆಗಳು ಹೀಗೆ ಹೇಳುತ್ತಿವೆ.
ಏಪ್ರಿಲ್ 26, 2021ರಂದು ಬ್ಲೂಮ್ಬರ್ಗ್ ಕ್ವಿಂಟ್ ನಲ್ಲಿ ಆದ ವರದಿ – ಲಸಿಕೆ ಪೂರೈಕೆಯ ವಿಳಂಬಕ್ಕೆ ಅಸ್ಟ್ರಾಜೆನೆಕಾ ಕಂಪನಿಯನ್ನು ನ್ಯಾಯಾಲಯಕ್ಕೆ ಒಯ್ದ ಯುರೋಪಿಯನ್ ಒಕ್ಕೂಟ
ಜನವರಿ 28, 2021ರ ವರದಿ – ಅಸ್ಚ್ರಾಜೆನೆಕಾದ ಬೆಲ್ಜಿಯಂ ಉತ್ಪಾದನಾ ಘಟಕದಲ್ಲಿ ತೊಂದರೆ; ಶೇ. 60 ರಷ್ಟು ಲಸಿಕೆ ಉತ್ಪಾದನೆ ಕುಸಿತ
ಮೇ 10, 2020 – ತಿಂಗಳುಗಟ್ಟಲೇ ವಿಳಂಬದ ನಂತರ ಅಂತೂ ಬಂತು ಫಿಲಿಪ್ಪೀನ್ಸ್ ಗೆ ಫಿಜರ್ ಲಸಿಕೆ
ಏಪ್ರಿಲ್ 19, 2021- ಮಾಡೆರ್ನಾ ಲಸಿಕೆ ಬರುವುದು ವಿಳಂಬ, ಇದೀಗ 1 ಮಿಲಿಯನ್ ಫಿಜರ್ ಲಸಿಕೆ ನಿರೀಕ್ಷಿಸುತ್ತಿರುವ ಕೆನಡಾ

ಈ ಮೇಲಿನ ತಲೆಬರಹಗಳೆಲ್ಲ ಉದಾಹರಣೆಗಳಷ್ಟೆ. ಲಸಿಕೆ ವಿಳಂಬದ ಬಗ್ಗೆ ಇಂಥ ಹಲವಾರು ವರದಿಗಳು ಲಭ್ಯ ಇವೆ. ಇದರರ್ಥ ಇಷ್ಟೆ. ಸಂಪನ್ಮೂಲ ಮತ್ತು ಜಾಗತಿಕ ರಾಜಕೀಯ ಪ್ರಭಾವಳಿಗಳಿರುವ ದೇಶಗಳೇ ಪೂರ್ವನಿರ್ಧಾರಿತ ಒಪ್ಪಂದದ ಹೊರತಾಗಿಯೂ ತಮ್ಮ ಪಾಲಿನ ಲಸಿಕೆ ಪಡೆಯುವುದಕ್ಕೆ ವಿಳಂಬ ಅನುಭವಿಸಿವೆ. ಹಣವಿದ್ದರೂ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಲಸಿಕೆ ಕಂಪನಿಗಳಿಗೆ ಸಮಯ ಹಿಡಿದಿರುವುದು ಸ್ಪಷ್ಟ.
ಹಣ ಸುರಿದರೆ ಲಸಿಕೆ ತ್ವರಿತವಾಗಿ ಸಿಗುತ್ತದೆ ಎಂಬುದು ಭ್ರಮೆ ಎಂದು ಜಾಗತಿಕ ಅನುಭವವೇ ನಿರೂಪಿಸುತ್ತಿದೆ. ಬಹುಶಃ ಇದನ್ನು ಮನಗಂಡೇ ಲಸಿಕೆ ನೀತಿ ವಿಕೇಂದ್ರೀಕರಣವಾಗಬೇಕು ಎನ್ನುತ್ತಿದ್ದ ಪ್ರತಿಪಕ್ಷಗಳು, ಖುದ್ದು ರಾಹುಲ್ ಗಾಂಧಿ ಸಹ ಕೇಂದ್ರ ಸರ್ಕಾರವೇ ಲಸಿಕೆಗಳನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಪುಕ್ಕಟ್ಟೆ ನೀಡಲಿ ಎನ್ನುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!