Sunday, April 18, 2021

Latest Posts

ಊಟದ ಮಧ್ಯೆ ನೀರು ಕುಡಿಯೋದ್ರಿಂದ ಏನಾಗುತ್ತದೆ?

ಊಟಕ್ಕೆ ತಟ್ಟೆ ಜೋಡಿಸಿದ ಮೇಲೆ ಚೊಂಬು ತುಂಬಾ ನೀರು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಊಟ ಇಟ್ಟೋರ‍್ಗೆ ನೀರು ಕೊಡೋಕೆ ಆಗಲ್ವಾ? ಅಂತ ದೊಡ್ಡೋರ್ ಹತ್ರ ಬೈಸ್ಕೋಬೇಕು. ಊಟದ ಮಧ್ಯೆ ಯಾರಾದ್ರೂ ಕೆಮ್ಮಿಬಿಟ್ರೆ ನೀರಿಟ್ಟಿಲ್ಲ ಅನ್ನೋದೆ ದೊಡ್ಡ ಇಶ್ಯೂ ಆಗಿಬಿಡುತ್ತದೆ. ಆದರೆ ಊಟದ ಮಧ್ಯೆ ನೀರು ಕುಡಿಯೋದು ಒಳ್ಳೆಯದಾ?
ಖಂಡಿತಾ ಇಲ್ಲ, ಊಟದ ಮಧ್ಯೆ ನೀರು ಕುಡಿಯಬೇಡಿ. ಊಟ ಮಾಡುವ ಮಧ್ಯೆ ನೀರು ಕುಡಿದಾಗ ಜೀರ್ಣಕ್ರಿಯೆ ಸಮಸ್ಯೆ ಆಗುತ್ತದೆ. ಆಹಾರದ ಅಗುಳು ನಿಮ್ಮ ಬಾಯಲ್ಲಿ ತುಂಬಾ ಹೊತ್ತು ಜಗಿದು ನುಂಗಬೇಕು. ಆದರೆ ಮಧ್ಯದಲ್ಲಿಯೇ ನೀರು ಕುಡಿದರೆ ಅಗುಳು ಜಗಿಯೋದಿಲ್ಲ, ಹಾಗೆಯೇ ನುಂಗಿಬಿಡುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಜೊತೆಗೆ ಬ್ಲೋಟ್ ಆದಂತೆ ಭಾಸವಾಗುತ್ತದೆ. ಊಟ ಆದ ಇಪ್ಪತ್ತು ನಿಮಿಷದ ನಂತರ ನೀರು ಕುಡಿಯೋದು ಬೆಟರ್.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss