ನೋಡೋಕೆ ಚೆನ್ನಾಗಿರುವ ಚೀಪ್ ರೇಟಿನ ಬಾಲಟಿಗಳನ್ನು ಖರೀದಿಸಿದ್ದೀರಾ? ಎಲ್ಲರ ಮನೆ ಫ್ರಿಡ್ಜ್ ತೆಗೆದು ನೋಡಿದಾಗ ಜ್ಯೂಸ್ ಕುಡಿದ, ಬೆವರೇಜಸ್ ಕುಡಿದ ಬಾಟಲಿಗಳಿಗೆ ನೀರು ಹಾಕಿ ಇಟ್ಟಿರುವುದು ಕಾಣುತ್ತದೆ. ಅದರ ಮೇಲೆ ಒಂದು ಬಾರಿ ಬಳಸಿ ಬಿಸಾಡಿ ಎಂದು ಬರೆದಿದ್ದರೂ ಅದನ್ನು ಮನೆಗೆ ತಂದು ಫ್ರಿಡ್ಜ್ನಲ್ಲಿ ಇಟ್ಟುಕೊಳ್ಳುತ್ತಾರೆ.
ಆದರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಾ?
ಯೂಸ್ ಆಂಡ್ ಥ್ರೋ ಬಾಟಲಿಗಳಲ್ಲಿ ನೀರು, ಜ್ಯೂಸ್ ಏನು ಕುಡಿದರೂ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ. ಬಾಟಲಿ ತಯಾರಿಸಲು ಬಳಸಿರುವ ಕೆಮಿಕಲ್ಗಳು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಬಿಸಿಲಿಗೆ ಇಟ್ಟಾಗ ಅಥವಾ ಹಾಗೆ ಇಟ್ಟರೂ ಬಾಟಲಿಯ ಕೆಮಿಕಲ್ಸ್ ನೀರಿಗೆ ಬರುತ್ತದೆ ಇದರಿಂದ ಕ್ಯಾನ್ಸರ್ ಕೂಡ ಬರಬಹುದು.