ದುಡ್ಡಿನ ಮೇಲಿರುವ ಮೆಸೇಜ್ಗಳನ್ನು ಓದಿದ್ದೀರಾ? ಹೆಚ್ಚಾಗಿ ದುಡ್ಡುಕೊಟ್ಟವರು ನೋಟುಗಳನ್ನು ಎಣಿಸಿ ಎಷ್ಟು ನೋಟುಗಳಿವೆ ಎಂದು ಬರೆಯುತ್ತಾರೆ, ಇನ್ನೂ ಜಾಣರು ನೋಟಿನ ಮೇಲೆ ಮೆಸೇಜ್ಗಳನ್ನು ಬರೆಯುತ್ತಾರೆ. ಐ ಲವ್ ಯು, ಮಿಸ್ ಯೂ, ಫೋನ್ ನಂಬರ್ಗಳು ಇರುತ್ತವೆ. ಈ ರೀತಿ ಮಾಡೋದ್ರಿಂದ ಏನೂ ಸಮಸ್ಯೆ ಆಗೋದಿಲ್ವಾ?
ಖಂಡಿತಾ ಆಗುತ್ತದೆ ನೋಟ್ಗಳ ಮೇಲೆ ಏನೇನನ್ನೋ ಗೀಚೋದ್ರಿಂದ ಏನಾಗತ್ತೆ ಗೊತ್ತಾ?
ಪೇಪರ್ ಅಂದುಕೊಂಡು ಪೆನ್ ತೆಗೆದುಕೊಂಡು ನೋಟ್ಸ್ ಮೇಲೆ ಬರೆಯುವುದರಿಂದ ನೋಟ್ ಹಾಳಾಗುತ್ತದೆ. ಕೆಲವೊಮ್ಮೆ ಹರಿದು ಹೋಗುತ್ತದೆ. ಎಷ್ಟೋ ಮಂದಿ ಅಂಗಡಿಯಲ್ಲಿ ಹರಿದಿರುವ, ಬರೆದಿರುವ ನೋಟುಗಳನ್ನು ಪಡೆಯುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದೆ.
ನೋಟುಗಳ ಮೇಲೆ ಬರೆಯುವುದರಿಂದ ಬಾಳಿಕೆ ಕಡಿಮೆ ಆಗುತ್ತದೆ. ಇದು ದೇಶಕ್ಕೇ ಸಂಬಂಧಿಸಿದ ಸಮಸ್ಯೆ ಏನಂತೀರಿ?