SPECIAL| ʻಮದರ್ಸ್‌ ಡೇʼ ಯಂದು ಅಮ್ಮನ ಖುಷಿಗಾಗಿ ಇಷ್ಟೂ ಮಾಡೋಕ್ಕಾಗಲ್ವಾ? 

ತ್ರಿವೇಣಿ ಗಂಗಾಧರಪ್ಪ:‌ 

ಸೂರ್ಯ ಹುಟ್ಟೋಕು ಮುಂಚೆ ಎದ್ದು, ಇಡೀ ಕುಟುಂಬದವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾಳೆ. ತನ್ನ ಪತಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ಯಾರಿಗೆ ಯಾವ ಅಡುಗೆ-ತಿಂಡಿ ಇಷ್ಟವೋ ಅದೇ ಮಾಡ್ತಾಳೆ. ಅವೆರಲ್ಲ ಕಷ್ಟದಲ್ಲೂ ಹೆಗಲಾಗಿ ನಿಲ್ಲುವ ತಾಯಿಗೆ ಈ ವರ್ಷದ “ಅಂತರರಾಷ್ಟ್ರೀಯ ತಾಯಂದಿರ ದಿನ” ದಂದು ನಿಮ್ಮ ಅಮ್ಮನಿಗೆ ಇಷ್ಟವಾದುದನ್ನು ಮಾಡಿ ಅವರನ್ನು ಖುಷಿಪಡಿಸಿ.

  • ತಾಯಂದಿರ ದಿನದಂದು ಅಮ್ಮನ ನೆಚ್ಚಿನ ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸಿ. ಸಾಧ್ಯವಾದರೆ ಅವರ ಸಂಬಂಧಿಕರಿಗೂ ಕರೆ ಮಾಡಿ. ಅವರಿಗೆ ಕಲಿಸಿದ ಶಿಕ್ಷಕರೊಂದಿಗೆ ಸಹ ಮಾತನಾಡಿಸಿ, ಸಾಧ್ಯವಾಗದಿದ್ದರೆ ಅವರಿಂದ ಚಿಕ್ಕ ವೀಡಿಯೋ ಮಾಡಿ ಅಮ್ಮನಿಗೆ ಗಿಫ್ಟ್ ಕೊಡಿ.
  • ನೀವು ಅಮ್ಮನನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ಅದ್ಭುತ ವಾಕ್ಯಗಳಲ್ಲಿ ವರ್ಣಿಸಿ. ಸುಂದರವಾದ ಕವನ ಬರೆಯಿರಿ.
  • ಇಡೀ ಕುಟುಂಬದೊಂದಿಗೆ ಬೆರೆತು ಸರ್ಪ್ರೈಸ್‌ ನೀಡಿ. ಕೇಕ್ ಕತ್ತರಿಸಿ ಅಮ್ಮನ ಬಗ್ಗೆ ಒಂದೆರೆಡು ಪ್ರೀತಿಯ ಮಾತಾಡಿ.
  •  ಕೆಟ್ಟ ಅಭ್ಯಾಸ ಇದ್ದರೆ ಅದನ್ನು ಬಿಡುವುದಾಗಿ ಅಮ್ಮನಿಗೆ ಮಾತು ಕೊಡಿ.‌ ನಿಮ್ಮ ತಾಯಿಗೆ ಅದೂ ಒಂದು ಗಿಫ್ಟ್.‌
  • ತಾಯಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಜೊತೆಗೆ ಅಮ್ಮನ ಆರೋಗ್ಯದ ಬಗ್ಗೆ ನಿಗಾ ಇರಿಸಿ.
  • ಅವರಿಗಿಷ್ಟವಾದುದನ್ನು ಕಡಿಮೆ ದುಡ್ಡಿನದ್ದಾದರೂ ಸರಿಯೇ ತಂದುಕೊಡಿ.
  • ಯಾರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೋ ತಿಳಿದು ಅವರನ್ನು ಕರೆಸಿ ಒಂದೊಳ್ಳೆ ಸ್ಥಳಕ್ಕೆ ಕಳಿಸಿ.
  • ಅವಳೊಂದಿಗೆ ಸಮಯ ಕಳೆದು ಹಿಂದಿನ ದಿನಗಳ ಒಳ್ಳೊಳ್ಳೆ ಘಟನೆಗಳನ್ನು ಮೆಲುಕು ಹಾಕಿ.
  • ಅಮ್ಮನ ಮನಸಿಗೆ ಘಾಸಿಯುಂಟು ಮಾಡಿದ್ದರೆ ಅವಳ ಮೊಣಕಾಲ ಬಳಿ ಕುಳಿತು ಕ್ಷಮೆ ಕೇಳಿ, ಮಾತೃಹೃದಯ ಅಲ್ವಾ ಸಂತೋಷದಿಂದ ಕ್ಷಮೆ ಸಿಕ್ಕೀತು.

ಅಮ್ಮನಿಗೆ ಚಿಕ್ಕಪುಟ್ಟ ಖುಷಿಗಳು ಸಾಕು…ಅವೇ ಅವಳಿಗೆ ದೊಡ್ಡ ಸಂಭ್ರಮ. ಅಮ್ಮನಿಗೆ ಇಷ್ಟವಾದುದನ್ನು ಮಾಡಿ. ಅದೊಂದು ಸುಂದರ ಸಂಭ್ರಮ ಘಳಿಗೆಯನ್ನು ಅವಳ ಪಾಲಿಗೆ ಮೀಸಲಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!