ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಂಕಿಪೊಟ್ಟಣದ ಚಿತ್ರವನ್ನೂ ಈ ರೀತಿ ಅಧ್ಯಯನ ಮಾಡ್ಬೋದಾ? ಈಕೆಯ ಹವ್ಯಾಸವೇ ಒಂದು ವಿಚಿತ್ರ!

  • ಹಿತೈಷಿ

ಸಣ್ಣವರಿದ್ದಾಗ ಏನಾದರೂ ಒಂದು ಸಂಗ್ರಹ ಮಾಡುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವರು ನಾಣ್ಯ, ನೋಟು, ಎಲೆ ಇನ್ನೂ ಹಲವರು ನೆಚ್ಚಿನ ಸಿನಿಮಾ ತಾರೆಯರ ಫೋಟೊಗಳ ಕಲೆಕ್ಷನ್ ಇಟ್ಟಿರುತ್ತಾರೆ.

ಆದರೆ ಇಲ್ಲೊಬ್ಬಳು ಯುವತಿ ಯಾವ ಅಂಗಡಿಗೆ, ಯಾವ ಊರಿಗೆ ಹೋದರೂ ಬೆಂಕಿಪೊಟ್ಣ ಇದೆಯಾ ಎಂದು ಕೇಳುತ್ತಿದ್ದಳು.. ಆಕೆ ಬೆಂಕಿ ಪೊಟ್ಟಣ ಕೇಳಿದಾಗ ಅಂಗಡಿಯಾತ ಆಕೆ ಸಿಗರೇಟ್ ಸೇದೋಕೆ ಕೇಳ್ತಿದ್ದಾಳೆ ಅಂತ ಕೊಡೋದನ್ನೇ ನಿಲ್ಲಿಸಿದ್ರು. ಮುಂದೇನಾಯ್ತು? ಆಕೆಗೆ ಬೆಂಕಿಪೊಟ್ಟಣ ಸಿಗ್ತಾ? ಅಥವಾ ಇದು ವಿಚಿತ್ರ ಹಾಬಿ ಅಂತ ಬಿಟ್ಟುಬಿಟ್ಲಾ??? ಇಲ್ಲಿದೆ ನೋಡಿ ಅವಳ ಈ ಡಿಫರೆಂಟ್ ಹವ್ಯಾಸದ ಚುಟುಕು ಪರಿಚಯ..

In Pics: Freedom Fighters to Food, This 28-YO Has 5000 Matchboxes

27 ವರ್ಷದ ಶ್ರೇಯಾ ಕತೂರಿ. ಮೂಲತ: ದೆಹಲಿಯವರಾಗಿದ್ದು, ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಇವರದ್ದು ಸಿಕ್ಕ ಸಿಕ್ಕ ಬೆಂಕಿಪೊಟ್ಟಣಗಳನ್ನೆಲ್ಲಾ ಸಂಗ್ರಹಿಸುವ ಸಖತ್ ಡಿಫರೆಂಟ್ ಹವ್ಯಾಸ. ಭಾರತದಲ್ಲಿ ಹೆಣ್ಣು ಮಕ್ಕಳು ಪೆಟ್ಟಿಗೆ ಅಂಗಡಿಗೆ ಹೋಗಿ ಬೆಂಕಿಪೊಟ್ಟಣ ಕೇಳಿದರೆ ಆಕೆ ಸಿಗರೇಟ್ ಸೇದೋಕೆ ಕೇಳುತ್ತಿದ್ದಾಳೇನೋ ಅಂದುಕೊಳ್ಳೋದು ಸಹಜ. ಇದೇ ಅನುಭವ ಶ್ರೇಯಾ ಅವರಿಗೂ ಆಗಿತ್ತು.

2015ರಲ್ಲಿ ಶ್ರೇಯಾ ವಾರಣಾಸಿಯ ಅಂಗಡಿವೊಂದರಲ್ಲಿ ಬೆಂಕಿಪೊಟ್ಟಣ ಕೇಳಿದರು. ಆದರೆ ಅಂಗಡಿಯವನು ಈಕೆ ಬೀಡಿ ಸೇದಬಹುದು ಎಂದು ಊಹಿಸಿ ಬೆಂಕಿಪೊಟ್ಟಣ ಕೊಡಲು ನಿರಾಕರಿಸಿದನು. ಆಗ ಶ್ರೇಯಾ ತಮ್ಮ ತಾಯಿಯನ್ನು ಕರೆದೊಯ್ದು ಅಂಗಡಿಯವನ ಮನವೊಲಿಸಿ ಅಂತೂ ಹಸುವಿನ ಭಾವಚಿತ್ರವಿರುವ ಬೆಂಕಿಪೊಟ್ಟಣ ಪಡೆದೇ ಬಿಟ್ಟರು.

An Instagram Project Documents Indian Histories Through Matchbox Art - Homegrown

ಇನ್ನೇನು ಹೀಗೆ ಅಂದುಕೊಂಡಂತೆ ಬೆಂಕಿಪೊಟ್ಟಣಗಳ ಸಂಗ್ರಹ ಜೋರಾಗಿಯೇ ನಡೆಯುತ್ತಿತ್ತು. ಆಗ ಆಕೆಗೆ ಎಲ್ಲಿಲ್ಲದ ಸಂತಸ. ಆಕೆಯ ಸಂಗ್ರಹದ ಪೆಟ್ಟಿಗೆಗೆ ಮತ್ತೊಂದು ಬಾಕ್ಸ್ ಸೇರುವ ಖುಷಿಯಲ್ಲಿದ್ದರು. ಹೀಗೆ 2013ರಿಂದ ಈವರೆಗೆ ಶ್ರೆಯಾ ಅವರು ಮ್ಯಾಚ್ ಬಾಕ್ಸ್ ಗಳನ್ನು ಸಂಗ್ರಹಿಸುತ್ತಲೇ ಬಂದಿದ್ದಾರೆ.

For 5 Years, Shreya Katuri Has Been Analysing Indian History Through Matchbox Art

ಪ್ರಾರಂಭವಾಗಿದ್ದು ಹೇಗೆ?: ಪತ್ರಿಕೋದ್ಯಮ ಪದವಿಯಲ್ಲಿ ಪ್ರಬಂಧ ಬರೆಯುವ ನಿಟ್ಟಿನಲ್ಲಿ ಮಾಧ್ಯಮ ಮತ್ತು ಸಂಸ್ಕೃತಿ ವಿಷಯವಾಗಿ ಆಳವಾದ ಅಧ್ಯಯನ ನಡೆಸಲು ನಿರ್ಧರಿಸಿದರು. ಈ ವೇಳೆ ಸಮಾಜದ ದೃಷ್ಟಿಕೋನದಿಂದ ಬೆಂಕಿಪೊಟ್ಟಣವನ್ನು ಭಾರತೀಯ ಚೌಕಟ್ಟಿಗನುಸಾರ ವಿಶ್ಲೇಷಿಸಲು ಮುಂದಾದರು.

A match made in heaven | Deccan Herald

ಸಂಗ್ರಹದ ಬಳಿಕ?: ಪ್ರಬಂಧಕ್ಕಾಗಿ ಪ್ರಾರಂಭಿಸಿದ ಈ ಹವ್ಯಾಸ ಮುಂದೆ ಅವರ ಜೀವನದಲ್ಲಿ ಪ್ರಮುಖವಾಗಿ ಬಿಟ್ಟಿತ್ತು. ಇದರೊಂದಿಗೆ ಅವರು ಆ ಚಿತ್ರಗಳನ್ನು ಭಾರತೀಯ ಸಂಸ್ಕೃತಿಯ ರೂಪಕ್ಕೆ ತಂದು ವಿಭಿನ್ನ ರೀತಿಯ ವಿಶ್ಲೇಷಣೆ ನೀಡುತ್ತಾ ಜನರಿಗೆ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದಕ್ಕೆ ಅವರು ಸಾಮಾಜಿಕ ಜಾಲತಾಣವಾದ ಇನ್ಸ್ ಟಾಗ್ರಂ ಮೂಲಕ ಆರ್ಟೋನಾ ಬಾಕ್ಸ್ ಅಡಿಯಲ್ಲಿ ವಿಚಾರ ಹಂಚಿಕೊಳ್ಳುತ್ತಿದ್ದಾರೆ.

ಮತ್ತೇನು ಅನಿಸಿಕೆ?: ಈ ಬೆಂಕಿಪೊಟ್ಟಣಗಳಲ್ಲಿ ಹೆಣ್ಣನ್ನು ಕೇವಲ ಗೃಹಿಣಿಯಂತೆ ಬಿಂಬಿಸಿದ್ದು, ಯಾವುದೇ ರೀತಿಯ ಗೌರವ ಸ್ಥಾನಗಳನ್ನು ನೀಡಿಲ್ಲ. ಪುರುಷರನ್ನು ಕ್ರಿಕೆಟಿಗರು, ರೈತರು, ವೃತ್ತಿಪರರಾಗಿ ಪ್ರದರ್ಶಿಸಲಾಗಿದೆ. ಈವರೆಗೆ ಯಾವುದೇ ಮಹಿಳೆಯನ್ನೂ ಉದ್ಯೋಗ ಸ್ಥಾನದಲ್ಲಿರಿಸುವ ಚಿತ್ರದ ಮ್ಯಾಚ್ ಬಾಕ್ಸ್ ಪತ್ತೆಯಾಗಿಲ್ಲ ಎನ್ನುತ್ತಾರೆ ಶ್ರೆಯಾ.

 

Match Point | Lifestyle News,The Indian Express

ಎಷ್ಟು ಸಂಗ್ರಹ?: ಶ್ರೇಯಾ ಈವರೆಗೂ ಬರೋಬ್ಬರಿ 5000 ಬೆಂಕಿಪೊಟ್ಟಣಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಆಕೆಗೆ ಎಲ್ಲಾ ವಿಚಾರಗಳು ಇಷ್ಟವಾಗುತ್ತದೆ. ಅದರಲ್ಲಿ ಬ್ರ್ಯಾಂಡ್ ಹಾಗೂ ಅದರ ನ್ಯಾನೋ, ಚೋಟಾ ಭೀಮ್, ಆಪಲ್ ಹಾಗೂ ಜುರಾಸಿಕ್ ಪಾರ್ಕ್ ಚಿತ್ರಗಳು ವಿಭಿನ್ನವಾಗಿ ಕಾಣುವುದರಿಂದ ಹೆಚ್ಚು ಆಸಕ್ತಿದಾಯಕವಾಗಿವೆಯಂತೆ.

Amateur Matchbox Collector Unravels Indian Cultural Evolution Through Matchbox Art

ಹೀಗೆ ಕೆಲಸದೊತ್ತಡಗಳ ನಡುವೆ ದಿನನಿತ್ಯ ಒಂದಿಷ್ಟು ವಿಭಿನ್ನ ಹವ್ಯಾಸಗಳನ್ನು ಅಳವಡಿಸಿಕೊಳ್ಳಿ. ಇದರಿಂದ ನಮ್ಮ ಬದುಕು ಮತ್ತಷ್ಟು ಕಲರ್ಫುಲ್ ಆಗಿರಲು ಜೊತೆಯಾಗುತ್ತದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss