WEIGHT LOSS | ಏನೇ ಮಾಡಿದ್ರೂ ತೂಕ ಇಳಿಸೋಕೆ ಆಗ್ತಿಲ್ವಾ? ಮೊದಲು ಈ ಕೆಲಸ ಮಾಡಿ..

ಸಣ್ಣ ಆಗಬೇಕು, ತೂಕ ಇಳಿಸಬೇಕು ಅಂತ ಸಾಕಷ್ಟು ಪ್ರಯತ್ನಪಟ್ಟರೂ ಯಾವುದೂ ವರ್ಕೌಟ್ ಆಗ್ತಿಲ್ಲ, ಏನು ಮಾಡಿದ್ರೂ ನಾಲ್ಕೇ ದಿನ, ವಾಕಿಂಗ್, ಜಾಗಿಂಗ್ ಹೀಗೆ ಏನೇ ಅಂದುಕೊಂಡರೂ ಯಾವುದೂ ಸಾಧ್ಯವಾಗೋದಿಲ್ಲ ಎಂದಾದರೆ ನಿಮ್ಮನ್ನು ನೀವು ಈ ರೀತಿ ಮೋಟಿವೇಟ್ ಮಾಡಿಕೊಳ್ಳಿ..

  • ಯಾಕೆ ಸಣ್ಣ ಆಗಬೇಕು? ತೂಕ ಇಳಿಸಬೇಕು? ಇದಕ್ಕೆ ಉತ್ತರ ಹುಡುಕಿ
  • ರಿಯಲಿಸ್ಟಿಕ್ ಆಸೆಗಳನ್ನು ಇಟ್ಟುಕೊಳ್ಳಿ, ಒಂದು ದಿನ ಡಯಟ್ ಮಾಡಿ, ಒಂದು ಕೆಜಿ ಇಳಿಸಬಲ್ಲೆ ಎನ್ನುವ ಆಸೆ ಬೇಡ.
  • ಬೇಗ ರಿಸಲ್ಟ್ ಬರಿ ಎಂದು ಕ್ರಾಶ್ ಡಯಟ್ ಹೋಗಬೇಡಿ, ಬೇಗ ಇಳಿದ ತೂಕ ಬೇಗ ಹೆಚ್ಚಾಗುತ್ತದೆ.
  • ನಿಮ್ಮ ಲೈಫ್‌ಸ್ಟೈಲ್ ಹೇಗಿದೆ? ಅದಕ್ಕೆ ತಕ್ಕಂಥ ಪ್ಲಾನ್ ಮಾಡಿ
  • ಒಂದು ಬುಕ್‌ನಲ್ಲಿ ನಿಮ್ಮ ತೂಕ ಇಳಿಕೆ ಬಗ್ಗೆ ಬರೆದುಕೊಳ್ಳಿ, ದಿನವೂ ಏನು ತಿಂತೀರಿ ಬರೆಯಿರಿ.
  • ಮೊದಲು ಐದು ಕೆಜಿ, ಮೂರು ಕೆಜಿ ಹೀಗೆ ಸಣ್ಣ ಗೋಲ್ ಇರಲಿ, ಆಮೇಲೆ ಇದೇ ದೊಡ್ಡದಾಗುತ್ತಾ ಹೋಗುತ್ತದೆ.
  • ಮನೆಯವರಿಗೆ, ಸಂಗಾತಿಗೆ, ಸ್ನೇಹಿತರಿಗೆ ಸಪೋರ್ಟ್ ಮಾಡುವಂತೆ ಕೇಳಿ.
  • ಯಾವಾಗಲೂ ಪಾಸಿಟಿವ್ ಆಗಿರಿ, ಸೂಕ್ತ ಆಲೋಚನೆ ಮಾಡಿ.
  • ನಿಮ್ಮ ದೇಹ ಹೇಗಿದೆ ಹಾಗೆ ಅದನ್ನು ಪ್ರೀತಿಸಿ, ಸೈಝ್ ಯಾವುದಾದರೇನು ಆರೋಗ್ಯ ಚೆನ್ನಾಗಿದ್ರೆ ಸಾಕಲ್ವಾ?
  • ನೀವು ಇಷ್ಟಪಡುವ, ಕಷ್ಟಪಡದ ವ್ಯಾಯಾಮ ಯಾವುದು ತಿಳಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!