Sunday, August 14, 2022

Latest Posts

ಬೈಕ್‌ನಲ್ಲಿ ಗಾಂಜಾ ಅಕ್ರಮ ಸಾಗಾಟ: ಆರೋಪಿ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ವಿಜಯಪುರ:

ಬೈಕ್‌ನಲ್ಲಿ ಅಕ್ರಮ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಅಬಕಾರಿ ಪೊಲೀಸರು ಬಂಧಿಸಿ, 1.10 ಲಕ್ಷ ರೂ.ಗಳ ಮೌಲ್ಯದ 4 ಕೆಜಿ ಗಾಂಜಾ ಹಾಗೂ ಬೈಕ್ ಅನ್ನು ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಕ್ರಾಸ್ ಬಳಿ ಜಪ್ತಿ ಮಾಡಿದ್ದಾರೆ.
ಅಮೋಘಸಿದ್ದ ಯಮನಪ್ಪ ಲೋಗಾಂವಿ ಬಂಧಿತ ಆರೋಪಿ.
ಅಮೋಘಸಿದ್ದ ಲೋಗಾಂವಿ ಈತನು ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿರುವ ಮಾಹಿತಿ ಆಧರಿಸಿ, ಅಬಕಾರಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದು, ಗಾಂಜಾ ಸೇರಿದಂತೆ ಬೈಕ್ ಜಪ್ತಿ ಮಾಡಿದ್ದಾರೆ.
ಅಬಕಾರಿ ಅಪರ ಆಯುಕ್ತ ವೈ.ಮಂಜುನಾಥ, ಅಬಕಾರಿ ಉಪ ಆಯುಕ್ತೆ ಸೈಯಿದ್ ಅಜ್ಮತ್ ಆಪ್ರೀನ್ ಮಾರ್ಗದರ್ಶನದಲ್ಲಿ, ಉಪ ಅಧೀಕ್ಷಕ ಎಚ್.ಎಸ್. ವಜ್ಜರಮಟ್ಟಿ, ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ನೇತೃತ್ವದ ತಂಡ ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss