Wednesday, August 17, 2022

Latest Posts

ಮಹಿಳೆಯ ಕೆಲಸಗಳಿಗೆ ಬೆಲೆ ಕಟ್ಟಲಾಗದು: ಡಾ.ತೇಜಸ್ವಿನಿ ಅನಂತಕುಮಾರ್

ಹೊಸದಿಗಂತ ವರದಿ, ಶಿವಮೊಗ್ಗ:

ಇನ್ನು ಮುಂದೆ ಯಾರೂ ಹೌಸ್‌ವೈಫ್ ಪದ ಬಳಸಬೇಡಿ, ಆಕೆಯ ಕೆಲಸಗಳಿಗೆ ಬೆಲೆ ಕಟ್ಟಲಾಗದು ಎಂದು ಅದಮ್ಯ ಚೇತನ ಸಂಸ್ಥಾಪಕಿ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ವತಿಯಿಂದ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆ ಕೂಡಾ ರೈತಳಾಗಿ, ವಿಜ್ಞಾನಿಯಾಗಿ ಎಲ್ಲಾ ವಲಯಗಳಲ್ಲೂ ಕೆಲಸ ಮಾಡುತ್ತಿದ್ದಾಳೆ. ಆದರೆ ಮನೆಯಲ್ಲೇ ಇದ್ದು ಮಾಡುವ ಕೆಲಸ ಕೂಡಾ ಬೆಲೆ ಕಟ್ಟಲಾಗದು. ಪ್ರಸ್ತುತ ಬೆಂಗಳೂರಿನಲ್ಲಿ ಮನೆ ಕೆಲಸದವಳಿಗೆ 18 ರಿಂದ 20 ಸಾವಿರ ರೂ. ವೇತನ ಕೊಡಬೇಕು.

ಹಿರಿಯರ ಆರೈಕೆ ಮಾಡಲು ಶುಶ್ರೂಷಕಿ 25 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುತ್ತಾಳೆ. ಟ್ಯೂಷನ್ ಕಳಿಸಿದರೆ ಅದರ ವೆಚ್ಚ ಪ್ರತ್ಯೇಕ. ಈ ಎಲ್ಲಾ ಕೆಲಸವನ್ನು ಮನೆಯಲ್ಲಿನ ಮಹಿಳೆ ಮಾಡುತ್ತಾಳೆ. ಹಾಗಾಗಿ ಅದಕ್ಕೆ ಬೆಲೆ ಕಟ್ಟಲಾಗದು ಎಂದರು.
ಸಚಿವ ಈಶ್ವರಪ್ಪ, ಕಾಂತೇಶ್ ಇನ್ನಿತರರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!