ಕಚೇರಿಗೆ ಕಾಲಿಡುವಂತಿಲ್ಲ, ಕಡತಗಳಿಗೆ ಸಹಿ ಮಾಡುವಂತಿಲ್ಲ, ಚರ್ಚೆ ಹೇಳಿಕೆಗಳಿಗೆ ಬಿಲ್‌ಕುಲ್ ಅವಕಾಶ ಇಲ್ಲ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಂತರ ಜಾಮೀನು ದೊರೆತಿದೆ, ಆದರೆ ಕಚೇರಿ, ಸಚಿವಾಲಯಕ್ಕೆ ಕಾಲಿಡುವಂತಿಲ್ಲ… ಯಾವುದೇ ಕಡತಗಳಿಗೆ ಸಹಿ ಕೂಡಾ ಹಾಕುವಂತಿಲ್ಲ!

ಇದು ಸದ್ಯ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ. ಜಾಮೀನು ಮಂಜೂರು ಮಾಡುವ ಸಂದರ್ಭ ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಜ್ರಿವಾಲ್‌ಗೆ ಸುಪ್ರಿಂ ಕೋರ್ಟ್ ಹುಕುಂ ನೀಡಿದೆ.

ಜೊತೆಗೆ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು, ಪ್ರಕರಣದ ಸಾಕ್ಷಿಗಳ ಜೊತೆ ಚರ್ಚಿಸಬಾರದು, ಪ್ರಕರಣದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಕಡತಗಳನ್ನು ನೋಡಬಾರದು ಎಂದು ಕೂಡಾ ಸುಪ್ರೀಂ ಕೋರ್ಟ್ ಖಡಕ್ಕಾಗಿ ಹೇಳಿದೆ.

ಕೇಜ್ರಿವಾಲ್ ವಿರುದ್ಧ ಗಂಭೀರ ಆಪಾದನೆಗಳಿವೆ. ಆದರೆ ಅವರು ದೋಷಿಯಾಗಿ ಸಾಬೀತಾಗಿಲ್ಲ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಗ್ರ ಮತ್ತು ಉದಾರ ದೃಷ್ಟಿಕೋನದಿಂದ ಅವರಿಗೆ ಜೂನ್ ೧ರವರೆಗೆ ಜಾಮೀನು ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!