World environment day | ಜೀವನ ಕೊಟ್ಟ ಪರಿಸರಕ್ಕಾಗಿ ಇಷ್ಟೂ ಮಾಡೋಕಾಗೋದಿಲ್ವಾ?

ಆಧುನಿಕ ಪ್ರಪಂಚದ ಪರಿಸರ ವಿಪತ್ತುಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ ಅನ್ವಯ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪರಿಸರ ನಮಗೆ ಏನೆಲ್ಲಾ ಕೊಟ್ಟಿದೆ, ಏನೆಲ್ಲಾ ಎನ್ನುವುದಕ್ಕಿಂತ ಎಲ್ಲವನ್ನೂ ನಮಗೆ ನೀಡಿದೆ ಎಂದರೆ ಸರಿಯಾಗಬಹುದು, ಆದರೆ ನಾವು ಪರಿಸರಕ್ಕೆ ಏನು ನೀಡಿದ್ದೇವೆ? ಭೂಮಿಯ ಫಲವತ್ತತೆ ನಾಶ ಮಾಡಿದ್ದೇವೆ, ಗಾಳಿಯ ಗುಣಮಟ್ಟ ಹದಗೆಡಿಸಿದ್ದೀವಿ, ನೀರನ್ನು ಕುಡಿಯಲು ಲಾಯಕ್ಕಿರದಂತೆ ಮಾಡಿದ್ದೀವಿ..

ಪರಿಸರಕ್ಕೆ ನಿಮ್ಮ ಕೊಡುಗೆ ಏನು? ನಿಮಗೆ ಜೀವನ ನೀಡಿದ ಈ ಪರಿಸರಕ್ಕೆ ನೀವೇನು ಕೊಡಲು ಸಾಧ್ಯ?

  • Reduce, Reuse, Recycle ಈ ಬಗ್ಗೆ ಕೇಳಿದ್ದೀರಿ ತಾನೆ? ಅನುಸರಿಸೋಕೆ ಮತ್ಯಾಕೆ ತಡ?
  • ಎಷ್ಟೋ ಕಮ್ಯುನಿಟಿಗಳು ನಿಮ್ಮದೇ ಸಿಟಿಯನ್ನು ಶುಚಿಗೊಳಿಸುವ ಕಾರ್ಯ ಮಾಡುತ್ತವೆ. ಇಲ್ಲಿ ದುಡ್ಡಿಲ್ಲ ಹೌದು, ಆದರೆ ನಿಮ್ಮ ಮನೆಯನ್ನು ಗುಡಿಸೋದಕ್ಕೆ ನಿಮಗೆ ಯಾರಾದ್ರೂ ದುಡ್ಡು ಕೊಡ್ತಾರೆ, ಭೂಮಿಯೇ ನಿಮ್ಮ ಮನೆ ಅಲ್ವಾ?
  • ಮೊದಲು ನೈಸರ್ಕಿಕ ಸಂಪನ್ಮೂಲಗಳ ಬಗ್ಗೆ, ಅದನ್ನು ಅತಿಯಾಗಿ ಬಳಸಿದರೆ ಆಗುವ ಸಮಸ್ಯೆಗಳ ಬಗ್ಗೆ ನೀವು ತಿಳಿದುಕೊಳ್ಳಿ, ಬೇರೆಯವರಿಗೂ ತಿಳಿ ಹೇಳಿ.
  • ನೀರಿನ ಬಳಕೆ ಮಿತವಾಗಿ ಮಾಡಿ! ಹಲ್ಲುಜ್ಜುವಾಗ ನಲ್ಲಿ ನೀರು ಸುರಿಯುತ್ತಲೇ ಇರಬೇಕು? ಅಲ್ವಾ? ಇದರಿಂದ ನಿಮಗೇ ನಷ್ಟ, ಯಾರಿಗೆ ಗೊತ್ತು ನೀವಿಂದು ಮಾಡಿದ ತಪ್ಪಿನಿಂದ ನಿಮ್ಮ ಮರಿಮೊಮ್ಮಕ್ಕಳಿಗೋ ಅವರ ಮಕ್ಕಳಿಗೋ ನೀರಿಲ್ಲದೆ ಪರಿತಪಿಸೋ ಸಮಸ್ಯೆ ಬರಬಹುದು.
  • ಸ್ವಾರ್ಥಿಗಳಾಗಬೇಡಿ, ನಾನು ಎಷ್ಟಾದ್ರೂ ನೀರು ಬಳಸ್ತೀನಿ, ನನ್ನ ಮಕ್ಕಳಿಗೂ ಬಳಸುಷ್ಟು ನೀರು ಇದ್ದೇ ಇರುತ್ತದೆ. ಮೊಮ್ಮಕ್ಕಳ ಕಾಲಕ್ಕೆ ಏನಾಗುತ್ತದೋ ಗೊತ್ತಿಲ್ಲ ನನಗೆ ಇದ್ದರೆ ಸಾಕು ಎನ್ನುವ ಮನೋಭಾವ ನಿಲ್ಲಿಸಿ
  • ಶಾಪಿಂಗ್ ಮಾಡುವಾಗ ಗಮನ ಇರಲಿ, ಒಂದು ಪ್ಲಾಸ್ಟಿಕ್ ಖರೀದಿಯಿಂದ ಏನೆಲ್ಲಾ ತೊಂದರೆ ಗೊತ್ತಾ? ತರಕಾರಿ ತರೋಕೆ ಹೋದಾಗ ಮನೆಯಲ್ಲಿರೋ ಕವರ್‌ನ್ನೇ ತೆಗೆದುಕೊಂಡು ಹೋಗಬಹುದಲ್ಲಾ? ಮನೆಯಲ್ಲಿ ಪ್ಲಾಸ್ಟಿಕ್ ಕವರ್ ಗುಡ್ಡೆ ಹಾಕಿ ಏನು ಮಾಡ್ತೀರಾ?
  • ನಿಮ್ಮ ಕೈಲಾದಾಗ, ಸಮಯ ಆದಾಗ, ಯಾವುದೇ ವಿಶೇಷ ಸಂದರ್ಭ ಬಂದಾಗ ಒಂದು ಗಿಡ ನೆಟ್ಟು ಆನಂದಿಸಬಹುದಲ್ವಾ?
  • ಆದಷ್ಟು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಿ, ಮನೆಗೆ ನಾಲ್ಕು ವಾಹನದಿಂದ ಪರಿಸರಕ್ಕೆ ಹಾನಿ ಅಲ್ವಾ?
  • ಕೈಲಾಗುವ ಕೆಲಸಗಳಿಗೆ ಮಶೀನ್ ಯಾಕೆ? ಶುಂಠಿ ಬೆಳ್ಳುಳ್ಳಿಯನ್ನು ಕಲ್ಲಿನಲ್ಲೇ ಕುಟ್ಟಬಹುದಲ್ಲವಾ? ಅದಕ್ಕೂ ಮಿಕ್ಸಿಯೇ ಯಾಕೆ ಬೇಕು?
  • ನೀವು ಬಳಕೆ ಮಾಡದ ವಸ್ತುಗಳನ್ನು ಎಸೆಯುವ ಅಥವಾ ಸುಡುವ ಬದಲು, ಇಲ್ಲದವರಿಗೆ ದಾನ ಮಾಡಿ.
  • ಪದೇ ಪದೆ ಯೋಚನೆಯಿಲ್ಲದೆ ಬಟ್ಟೆ ಖರೀದಿ ಮಾಡಬೇಡಿ. ನೀವು ಎಸೆದ ಬಟ್ಟೆಗಳು ಎಲ್ಲಿಗೆ ಹೋಗುತ್ತಿದೆ ಎನ್ನುವ ಬಗ್ಗೆ ಯೋಚನೆ ಇರಲಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!