ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ರಿತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಸಂಪೂರ್ಣವಾಗಿ ಐಪಿಎಲ್‌ನ 18 ನೇ ಸೀಸನ್‌ನಿಂದ ಹೊರಗುಳಿಯಲಿದ್ದು, ಅವರ ಬದಲಿಗೆ ಚೆನ್ನೈ ತಂಡದ ನಾಯಕತ್ವವನ್ನು ಸಂಪೂರ್ಣ ಸೀಸನ್‌ಗೆ ಎಂಎಸ್ ಧೊನಿ ವಹಿಸಿಕೊಳ್ಳಲಿದ್ದಾರೆ.
ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಎಂಎಸ್ ಧೋನಿ 2023 ರವರೆಗೆ ಐಪಿಎಲ್ ನಾಯಕತ್ವ ವಹಿಸಿದ ನಂತರ ರುತುರಾಜ್ ಗಾಯಕ್ವಾಡ್ ಅವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಋತುವಿನಲ್ಲಿ, ಅವರು ಕೊನೆಯ ಬಾರಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.