Monday, August 8, 2022

Latest Posts

ಕಾರು ಅಪಘಾತ: ಮರಾಠಿ ನಟಿ ಸ್ಥಳದಲ್ಲಿಯೇ ಸಾವು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇತ್ತೀಚೆಗೆ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮರಾಠಿ ನಟಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಹೌದು.. ಮರಾಠಿ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೆಳೆಯ ಜೊತೆಗೆ ಗೋವಾಗೆ ಬಂದಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಘಟನೆಯ ವಿವರ..

ಈಶ್ವರಿ ದೇಶಪಾಂಡೆ ಗೆಳೆಯ ಶುಭಂ ದಡ್ಗೆ ಜೊತೆ ಗೋವಾಕ್ಕೆ ತೆರಳಿದ್ದರು.   ಗೋವಾದಿಂದ ವಾಪಸ್ ಆಗುವ ವೇಳೆ ಬಾರ್ಡೇಜ್ ತಾಲೂಕಿನ ಅರ್ಪೋರಾ ಬಳಿ ಕಾರು ಅಪಘಾತಕ್ಕೀಡಾಯಿತು. ಈ ಭೀಕರ ಅಪಘಾತದಲ್ಲಿ ಈಶ್ವರಿ ಮತ್ತು ಶುಭಂ ದಡ್ಗೆ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

‘ಪ್ರೇಮಾಚೆ ಸೈಡ್ ಎಫೆಕ್ಟ್ಸ್’ ಸಿನಿಮಾ ಮೂಲಕ ಈಶ್ವರಿ ದೇಶಪಾಂಡೆ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕಿತ್ತು. ಗೋವಾಕ್ಕೆ ತೆರಳುವುದಕ್ಕೂ ಮೊದಲು ಹಲವು ಪ್ರಾಜೆಕ್ಟ್ ಗಳಿಗೆ ಸಹಿಹಾಕಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss