ಕೆಲಸದಿಂದ ಕಿತ್ತೊಗೆದ ಸಿಟ್ಟಿಗೆ 14 ಕಾರ್‌ಗೆ ಆಸಿಡ್ ಎರಚಿದ ಮಾಜಿ ಉದ್ಯೋಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ವ್ಯಕ್ತಿಯೊಬ್ಬ ಕಾರುಗಳ ಮೇಲೆ ಆಸಿಡ್‌ ಸುರಿದ ಘಟನೆ ನೊಯಿಡಾದಲ್ಲಿ ನಡೆದಿದೆ.

ಕಾರ್ ವಾಷರ್ ಆಗಿದ್ದಂತಹ ವ್ಯಕ್ತಿ ಆತನನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ ಸಿಟ್ಟಿಗೆದ್ದು ಪಾರ್ಕಿಂಗ್‌ ಮಾಡಲಾದ ಕಾರ್ ಮತ್ತು ಎಸ್‌ಯುವಿಗಳನ್ನು ಆಸಿಡ್ ಸುರಿದು ಧ್ವಂಸಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬುಧವಾರ ಬೆಳಗ್ಗೆ 9:15ರ ಸುಮಾರಿಗೆ ಗ್ರೂಪ್‌ ಹೌಸಿಂಗ್‌ ಸೊಸೈಟಿಯ ಪಾರ್ಕಿಂಗ್ ಸ್ಥಳದಲ್ಲಿ ಆರೋಪಿಯು ಕಾರುಗಳು ಮತ್ತು ಎಸ್‌ಯುವಿಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಮಾಲೀಕರು ಕಂಡುಹಿಡಿದಿದ್ದಾರೆ.

ನಂತರ ಸೊಸೈಟಿಯ ಭದ್ರತಾ ಅಧಿಕಾರಿ ಆರೋಪಿಯನ್ನು ಪತ್ತೆಹಚ್ಚಿದ್ದು, ಅಪಾರ್ಟ್‌ಮೆಂಟ್ ಮಾಲೀಕರ ಸಂಘವು ವಿಷಯವನ್ನು ಅರಿತು ಪೊಲೀಸ್‌ಗೆ ದೂರು ದಾಖಲಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 427 (ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!