ಇನ್ನು ಮುಂದೆ ಭಾರತದಲ್ಲೇ ಕಾರುಗಳ ಸೇಫ್ಟಿ ರೇಟಿಂಗ್‌ ಚೆಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾರುಗಳ ಅಪಘಾತ ಪರೀಕ್ಷೆ (ಕ್ರ್ಯಾಶ್‌ ಟೆಸ್ಟ್)‌ ಮಾಡುವ ಮೂಲಕ ಅವುಗಳ ಸುರಕ್ಷತೆಯನ್ನು ರೇಟಿಂಗ್‌ ಮಾಡುವ ವ್ಯವಸ್ಥೆಯು ಇನ್ನು ಮುಂದೆ ಭಾರತದಲ್ಲೇ ಪ್ರಾರಂಭವಾಗಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಇಲ್ಲಿಯವರೆಗೂ ಸೇಫ್ಟಿರೇಟಿಂಗ್‌ ಗಳಿಗಾಗಿ ಭಾರತದ ಕಾರು ತಯಾರಕರು ಗ್ಲೋಬಲ್‌ ನ್ಯೂ ಕಾರ್‌ ಅಸೆಸ್ಮೆಂಟ್‌ ಪ್ರೊಗ್ರಾಮ್‌ (Global NCAP) ಗೆ ಕಳುಹಿಸಿಕೊಡಬೇಕಿತ್ತು. ಆದರೆ ಇನ್ನು ಮುಂದೆ ಈ ತಲೆನೋವು ದೂರವಾಗಲಿದೆ. ಭಾರತದಲ್ಲಿ ತಯಾರಾದ ಕಾರುಗಳ ಸುರಕ್ಷತಾ ಮಾನದಂಡಗಳನ್ನು ನಿರ್ಧರಿಸಿ ಅವುಗಳಿಗೆ ರೇಟಿಂಗ್‌ ಕೊಡುವ ಭಾರತ್‌ ಎನ್‌ಸಿಎಪಿ ವ್ಯವಸ್ಥೆಯನ್ನು ತರಲಾಗುತ್ತಿದ್ದು ಈಗಾಗಲೇ ಅದಕ್ಕೆ ಅನುಮೋದನೆ ದೊರಕಿದ್ದು ಸದಯದಲ್ಲೇ ಚಾಲ್ತಿಗೆ ಬರಲಿದೆ ಎಂದು ಗಡ್ಕರಿ ತಮ್ಮ ಟ್ವೀಟ್‌ ಒಂದರಲ್ಲಿ ತಿಳಿಸಿದ್ದಾರೆ.

“ಭಾರತವನ್ನು ವಿಶ್ವದಲ್ಲೇ ನಂಬರ್ 1 ಆಟೋಮೊಬೈಲ್ ಹಬ್ ಮಾಡುವ ಧ್ಯೇಯದೊಂದಿಗೆ ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತ್-ಎನ್‌ಸಿಎಪಿ ನಿರ್ಣಾಯಕ ಸಾಧನವಾಗಿದೆ.ಭಾರತ್-ಎನ್‌ಸಿಎಪಿ ಗ್ರಾಹಕ-ಕೇಂದ್ರಿತ ವೇದಿಕೆಯಾಗಿ ಸೇವೆ ಸಲ್ಲಿಸುತ್ತದೆ, ಗ್ರಾಹಕರು ತಮ್ಮ ಸ್ಟಾರ್-ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತೀಯ ಆಟೋಮೊಬೈಲ್‌ಗಳ ರಫ್ತು-ಯೋಗ್ಯತೆಯನ್ನು ಹೆಚ್ಚಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ” ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!