Saturday, October 1, 2022

Latest Posts

ಕಾರು-ಟೆಂಪೋ ಡಿಕ್ಕಿ: 14 ಪ್ರಯಾಣಿಕರಿಗೆ ಗಾಯ

ಹೊಸದಿಗಂತ ವರದಿ, ಕುಮಟಾ:

ಇನ್ನೋವಾ ಕಾರು ಹಾಗೂ ಪ್ರಯಾಣಿಕರ ಟೆಂಪೋ ನಡೆವೆ ಡಿಕ್ಕಿ ಸಂಭವಿಸಿದ ಪರಿಣಾಮ ೧೪ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ಪಟ್ಟಣದ ಹೊನ್ಮಾವ್ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಗಳಕೋಟೆ ಜಿಲ್ಲೆಯ ಮುದೋಳ ತಾಲೂಕಿನ ನಿವಾಸಿಗಳಾದ ನವೀನ ಬೊಳಾರ್, ಪ್ರತಿಮಾ ಬೊಳಾರ, ಭುವನ ಬೊಳಾರ, ಪುಷ್ಪಾವತಿ ಬೊಳಾರ ಮತ್ತು ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದ ೧೦ ಮಂದಿಗೆ ಗಾಯಗೊಂಡಿದೆ. ಮಂಗಳೂರಿನಿಂದ ಕುಮಟಾ ಕಡೆ ಬರುತ್ತಿದ್ದ ಇನ್ನೋವಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ, ಕುಮಟಾದಿಂದ ಪ್ರಯಾಣಿಕರನ್ನು ತುಂಬಿಕೊಂಡು ಹೊನ್ನಾವರ ಕಡೆ ತೆರಳುತ್ತಿದ್ದ ಟೆಂಪೊಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಸ್ಥಳೀಯರ ಸಹಕಾರದಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ನೀಡಿಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!