spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಲಿಂಪಿಕ್ಸ್ ಓಟದ ದಾಖಲೆಗಳು ಕಿಕ್ ಕೊಡುತ್ತಿವೆಯೇ? ಈ ಶೂಗಳಿಗೂ ಥ್ಯಾಂಕ್ಸ್ ಹೇಳಿ!

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈ ಬಾರಿ ಒಲಿಂಪಿಕ್ಸ್ ಓಟಗಳ ಸ್ಪರ್ಧೆಗಳಲ್ಲಿ ಹಲವು ಅಚ್ಚರಿಯ ದಾಖಲೆಗಳಾದಾವು. ಅದಾಗಲೇ ಕೆಲವು ಆಗಿವೆ. ಇವಕ್ಕೆಲ್ಲ ಆಯಾ ಕ್ರೀಡಾಪಟುಗಳಿಗೇನೋ ಶ್ರೇಯಸ್ಸು ಸಲ್ಲಲೇಬೇಕು. ಜತೆಗೆ ಈ ಬಾರಿ ಅವರೆಲ್ಲ ಧರಿಸಿದ ಶೂಗೆ, ಪಾದಕವಚಕ್ಕೆ ಸಹ ಹೊಸ ದಾಖಲೆ ಸೃಷ್ಟಿಯ ಜೈಕಾರಗಳು ಸಲ್ಲಬೇಕು!

ಬಹುತೇಕ ಅಥ್ಲೀಟ್ ಗಳು ಬಳಸುತ್ತಿರುವ ಶೂಗಳೀಗ ಸೂಪರ್ ಶೂ ಎಂದು ಕರೆಸಿಕೊಳ್ಳುತ್ತಿವೆ. ಇವುಗಳಲ್ಲಿ ಕಾರ್ಬನ್ ಪ್ಲೇಟ್ ಒಂದನ್ನು ಬಳಸಲಾಗುತ್ತಿದ್ದು ಇದು ಸ್ಪ್ರಿಂಗ್ ರೀತಿ ಕೆಲಸ ಮಾಡಿ ಓಟಗಾರರ ಕ್ಷಮತೆಯನ್ನು ಹೆಚ್ಚಿಸುತ್ತಿದೆ. ಇದರರ್ಥ ಸಾಮರ್ಥ್ಯ ಇರದಿದ್ದವರೂ ಓಡಿಬಿಡಬಹುದು ಎಂದೇನಲ್ಲ. ಆದರೆ ಓಟಗಾರನ ಕ್ಷಮತೆಯನ್ನು ತುಸುವೇ ಹೆಚ್ಚಿಸುವಲ್ಲಿ ಈ ಶೂ ನೆರವಾಗುತ್ತದೆ. ಒಲಿಂಪಿಕ್ಸ್ ಥರದ ಕ್ರೀಡೆಗಳಲ್ಲಿ ಸಾಸಿವೆ ಕಾಳಿನಷ್ಟು ವ್ಯತ್ಯಾಸವೂ ಕೆಲ ದಾಖಲೆಗಳನ್ನು ಮುರಿದು ಕಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟುಬಿಡುತ್ತದೆ. ಸೂಪರ್ ಶೂಗಳು ಇದನ್ನು ಸಾಧಿಸುತ್ತಿರುವಂತಿದೆ.

ಉದಾಹರಣೆಗೆ, ಆಗಸ್ಟ್ ಮೂರರಂದು ನಡೆದ 400 ಮೀಟರ್ ಅಡೆತಡೆ ಓಟದಲ್ಲಿ (ಹರ್ಡಲ್ಸ್) ಬಂಗಾರ ಪದಕ ಗೆದ್ದ ಕರ್ಸ್ತೆನ್ ವಾರ್ಹೊಮ್ 45 ನಿಮಿಷ 94 ಸೆಕೆಂಡುಗಳಲ್ಲಿ ಓಟ ಮುಗಿಸಿ ವಿಶ್ವದಾಖಲೆ ಬರೆದರು. ಎರಡನೆಯವರಾಗಿ ಬಂದ ಬೆಂಜಮಿನ್ 46.17 ಸೆಕೆಂಡುಗಳಲ್ಲಿ ಓಟ ಪೂರೈಸಿದ್ದೂ ವಿಶ್ವ ದಾಖಲೆಯೇ. ಇವರ ಕ್ಷಮತೆ ಹೆಚ್ಚಿಸುವುದಕ್ಕೆ ನೆರವಾಗಿದ್ದು ಸೂಪರ್ ಶೂ. 

ಮಹಿಳೆಯರ ನೂರು ಮೀಟರ್ ಓಟದಲ್ಲಿ ಕಳೆದ 33 ವರ್ಷಗಳಿಂದ ಇದ್ದ ದಾಖಲೆ ಎಂದರೆ 10.62 ಸೆಕೆಂಡುಗಳದ್ದು. ಅದನ್ನು ಈ ಬಾರಿ ಜಮೈಕಾದ ಓಟಗಾರ್ತಿ ಎಲೈನ್ ಥಾಮ್ಸನ್ 10.61 ಸೆಕೆಂಡುಗಳಲ್ಲಿ ಓಟ ಪೂರೈಸಿ ಮುರಿದು ಬಂಗಾರ ಗೆದ್ದಳು. ಥ್ಯಾಂಕ್ಸ್ ಟು ಸೂಪರ್ ಶೂ.

2016ರಿಂದೀಚೆಗೆ ಈ ಬಗೆಯ ಕಾರ್ಬನ್ ಪ್ಲೇಟ್ ಶೂ ಆವಿಷ್ಕಾರ ಅಭಿವೃದ್ಧಿ ಶುರುವಾಯಿತು. ಪ್ರಾರಂಭದಲ್ಲಿ ಇದರ ಶ್ರೇಯ ಪಡೆದಿದ್ದದ್ದು ನೈಕ್ ಕಂಪನಿ. ಆದರೆ ನಂತರದ ದಿನಗಳಲ್ಲಿ ಎಲ್ಲ ಸ್ಪೋರ್ಟ್ ಶೂ ಕಂಪನಿಗಳೂ ಇದನ್ನು ಕರಗತ ಮಾಡಿಕೊಂಡವು. ಈ ಸೂಪರ್ ಶೂವನ್ನು ಆಟಗಾರರೆಲ್ಲ ಒಪ್ಪಿಕೊಳ್ಳಲು ಕಾರಣವಾಗಿದ್ದು ವಿಯೆನ್ನಾದಲ್ಲಿ 2019ರಲ್ಲಿ ನಡೆದ ವಿದ್ಯಮಾನ. ಇದರಲ್ಲಿ ಸೂಪರ್ ಶೂ ಹಾಕಿ ಓಡಿದ ಇಲಿಡ್ ಕಿಪ್ಶಾಗ್ ಎರಡು ತಾಸಿನ ಒಳಗೆ ಮ್ಯಾರಥಾನ್ ಮುಗಿಸಿ ದಾಖಲೆ ಮಾಡಿದಾಗ. 

ತಂತ್ರಜ್ಞಾನವು ಒಲಿಂಪಿಕ್ಸ್ ಆಟಗಳಲ್ಲಿ ಹೇಗೆ ಬದಲಾವಣೆ ತಂದಿದೆ ಎಂಬುದಕ್ಕೆ ನೆನಪು ಮಾಡಿಕೊಳ್ಳಬೇಕಾದ ಹೆಸರು ಅಬೆಬೆ ಬಿಕಿಲಾ. 1960ರ ರೋಮ್ ಒಲಿಂಪಿಕ್ಸ್ ನಲ್ಲಿ ಇಥಿಯೋಪಿಯಾದಿಂದ ಬಂದು ಮ್ಯಾರಥಾನ್ ಚಿನ್ನ ಗೆದ್ದ ಪ್ರತಿಭೆ ಬಿಕಿಲಾ. ಕೊನೆಕ್ಷಣದಲ್ಲಿ ಆಟಗಾರರೊಬ್ಬರ ಬದಲಿಗೆ ಓಡಬೇಕಾಗಿ ಬಂದ ಬಿಕಿಲಾಗೆ ತಕ್ಕ ಶೂ ಇರಲಿಲ್ಲ. ಆ ಮನುಷ್ಯ ಕೇವಲ ಬರಿಗಾಲಿನಲ್ಲೇ ಮ್ಯಾರಥಾನ್ ಓಡಿ ಮೊದಲಿಗನಾಗಿ ಬಂದು ಜಗತ್ತನ್ನೇ ನಿಬ್ಬೆರಗಾಗಿಸಿದ.

ಈಗ ಕಾರ್ಬನ್ ಪದರದ ಶೂ ಸದ್ದುಮಾಡುತ್ತ ಹೊಸ ದಾಖಲೆಗಳ ಸೃಷ್ಟಿಗೆ ನೆರವಾಗುತ್ತಿದೆ. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss