ಬಾಂಗ್ಲಾ ಬಂದರಿನ ಮೂಲಕ ಈಶಾನ್ಯರಾಜ್ಯಗಳಿಗೆ ಸರಕು ಸಾಗಣೆ: ಪ್ರಾಯೋಗಿಕ ಪರೀಕ್ಷೆ ನಡೆಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಂಗ್ಲಾದೇಶದ ಬಂದರುಗಳನ್ನು ಬಳಸಿಕೊಂಡು ಈಶಾನ್ಯ ರಾಜ್ಯಗಳಿಗೆ ಸರಕು ಸಾಗಿಸುವ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಭಾರತ ಮಂಗಳವಾರ ನಡೆಸಿದೆ. ಬಾಂಗ್ಲಾದೇಶದ ಮೋಂಗ್ಲಾ ಬಂದರಿನನ ಮೂಲಕ ಎರಡು ಕಂಟೇನರ್‌ ಗಳನ್ನು ಪ್ರಾಯೋಗಿಕವಾಗಿ ಸಾಗಿಸಲಾಗಿದೆ.

ಈ ಪ್ರಾಯೋಗಿಕ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಬಾಂಗ್ಲಾದೇಶದ ಅಧಿಕಾರಿಗಳು ಕಸ್ಟಮ್ಸ್ ಕಾರ್ಯವಿಧಾನಗಳನ್ನು ಒಳಗೊಂಡಂತೆ ಕೆಲವು ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುವ ಸಲುವಾಗಿ ಆಗಸ್ಟ್‌ಗೆ ಮುಂದೂಡಲಾಯಿತು. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಯೋಜಿತ ಭೇಟಿ ನೀಡುವ ಮುನ್ನ ಈ ಬೆಳವಣಿಗೆ ನಡೆದಿದೆ.

ಬಾಂಗ್ಲಾದೇಶದ ಚಟ್ಟೋಗ್ರಾಮ್(ಚಿತ್ತಗಾಂಗ್) ಮತ್ತು ಮೊಂಗ್ಲಾ ಬಂದರುಗಳ ಮೂಲಕ‌ ಭಾರತದ ಈಶಾನ್ಯ ರಾಜ್ಯಗಳಿಗೆ ಸರಕುಗಳ ಸಾಗಣೆಗಾಗಿ ಅಕ್ಟೋಬರ್ 2018 ರಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರ ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ ಎರಡು ಕಂಟೇನರ್‌ಗಳನ್ನು ಹೊತ್ತ ಹಡಗು ಮೊಂಗ್ಲಾ ಬಂದರಿಗೆ ಆಗಮಿಸಿದೆ ಎಂದು ಢಾಕಾದಲ್ಲಿನ ಭಾರತೀಯ ಹೈ ಕಮೀಷನ್‌ ಹೇಳಿದೆ. ಈಶಾನ್ಯ ರಾಜ್ಯಗಳಿಗೆ ಸರಕು ಸಾಗಣೆ ಮಾಡುವಲ್ಲಿ ಈ ಬೆಳವಣಿಗೆಯು ಪ್ರಮುಖವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!