ಹೊಸದಿಗಂತ ರಾಯಚೂರು :
ಬೆಳಗಿನ ಜಾವ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 130 ಕುರಿಗಳು ಮೃತಪಟ್ಟು 18ಕ್ಕೂ ಹೆಚ್ಚು ಕುರಿಗಳು ಗಾಯಗೊಂಡ ಘಟನೆ ಯರಮರಸ್ ಬೈಪಾಸ್ ಬಳಿ ಜರುಗಿದೆ. ಕುರಿಗಾಹಿಗಳು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪರಾಗಿದ್ದಾರೆ.
ಖಾಸಗಿ ಸ್ಲೀಪರ್ ವ್ಯವಸ್ಥೆ ಇರುವ ಬಸ್ (ವಿಆರ್‌ಎಲ್ ಸಂಸ್ಥೆಗೆ ಸೇರಿದ ಬಸ್ ನಂ ಎಂಹೆಚ್.12- ಟಿವಿ 6086) ಹೈದರಾಬಾದ್ ನಿಂದ ರಾಯಚೂರು ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿತ್ತು. ಈ ಬಸ್ ಯರಮರಸ್ ಕಡೆಗೆ ತೆರಳುತ್ತಿದ್ದ ಕುರಿ ಹಿಂಡಿನ ಮೇಲೆ ಹಾದು ಹೋಗಿರುವ ಪರಿಣಾಮ ಸ್ಥಳದಲ್ಲೇ 130 ಕುರಿಗಳು ಮೃತಪಟ್ಟಿದ್ದಲ್ಲದೆ 18ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ.
ತೆಲಂಗಾಣ ರಾಜ್ಯದ ಮಕ್ತಲ್‌ನ ಓಬಳಾಪುರಂ ಗ್ರಾಮದ ಮೂಲದ ಕುರಿಗಾಹಿಗಳಾದ ಮಲ್ಲೇಶ್, ಸೀನಪ್ಪ, ಬಾಲರಾಜು ಎಂಬುವವರಿಗೆ ಸೇರಿದ ಕುರಿಗಳಾಗಿವೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂಧಿಗಳು ಭೇಟಿ ನೀಡಿ ಖಾಸಗಿ ಬಸ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.