Tuesday, August 16, 2022

Latest Posts

ಜಮೀನು ಅಕ್ರಮ ಮಾರಾಟ, ನೋಂದಣಿ ಮಾಡಿದ ಆರೋಪ: 7 ಜನರ ವಿರುದ್ಧ ಪ್ರಕರಣ ದಾಖಲು

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನದಿಪಾತ್ರದ ಖರಾಬು ಜಮೀನು ಮಾರಾಟ ಹಾಗೂ ನೋಂದಣಿ ಮಾಡಿದ ಆರೋಪದ ಮೇಲೆ ಶೃಂಗೇರಿ ಠಾಣೆಯಲ್ಲಿ 7
ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ವಿ.ಎಂ. ಬೆಳ್ಳಚ್ಚಾರ್ ಹಾಗೂ ಖರೀದಿ ಮಾಡಿದ ಆರೋಪದಡಿ ಕಲ್ಮಕ್ಕಿ ಪ್ರದೀಪ್ ಮೇಲೆ ಪ್ರಕರಣ ದಾಖಲಾಗಿದೆ .
ನೋಂದಣಿ ಮಾಡಿದ ಆರೋಪದಡಿ ಕೊಪ್ಪ ಉಪ ನೋಂದಣಾಧಿಕಾರಿ ಎಸ್.ಅನಿತಾ, ಕಂಪ್ಯೂಟರ್ ನಿರ್ವಾಹಕರಾದ ಎಚ್.ಎನ್.ಕಿರಣ್, ನೇತ್ರಾವತಿ ಸಾಕ್ಷಿದಾರರಾದ ಅಗಸನಹಳ್ಳಿ ಬಿ.ವಿ.ಭಾಸ್ಕರ್, ಎಸ್.ಕುಮಾರ್ ವಿರುದ್ಧ ದೂರು ದಾಖಲಾಗಿರುವುದನ್ನು ಉಪನೋಂದಣಾಧಿಕಾರಿ ಚಲುವರಾಜ್ ಖಚಿತಪಡಿಸಿದ್ದಾರೆ.
2016 ಡಿಸೆಂಬರ್ 12 ರಂದು ಶೃಂಗೇರಿ ಉಪನೋಂದಣಿ ಕಚೇರಿಯಲ್ಲಿ ನದಿಪಾತ್ರದ ಖರಾಬು ಜಮೀನನ್ನು ನೋಂದಣಿ ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!