ಹೋಮ್ ವರ್ಕ್ ಮಾಡದ ಮಗುವಿಗೆ ತಾಯಿ ಕಠಿಣ ಶಿಕ್ಷೆ, ಪೊಲೀಸರು ಮಾಡಿದ್ದೇನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಕ್ಕಮಕ್ಕಳು ಎಲ್ಲದಕ್ಕೂ ಹಠ ಮಾಡೋದು ಕಾಮನ್‌, ಅದರಲ್ಲೂ ಹೋಮ್ ವರ್ಕ್‌ ವಿಚಾರದಲ್ಲಿ ಮಾತ್ರ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಹೀಗೆ ಹೋಂ ವರ್ಕ್‌ ಮಾಡದ ಮಗುವಿಗೆ ತಾಯಿಯೊಬ್ಬಳು ಯಾರೂ ಊಹಿಸದ ರೀತಿಯಲ್ಲಿ ಶಿಕ್ಷೆ ವಿಧಿಸಿದ್ದಾಳೆ.  ಮಗುವಿನ ಕೈ-ಕಾಲುಗಳನ್ನು ಕಟ್ಟಿ ಹಾಕಿ, ಮಧ್ಯಾಹ್ನ 2ಗಂಟೆ ವೇಳೆಗೆ ಸುಡುವ ರಣ ಬಿಸಿಲಿನಲ್ಲಿ ಮನೆಯ ಟೆರಸ್‌ ಮೇಲೆ ಮಲಗಿಸಿರುವ ಘಟನೆ ದೆಹಲಿಯ ಖಜೂರಿಖಾಸ್ ಪ್ರದೇಶದಲ್ಲಿ ನಡೆದಿದೆ. ಕೆಂಡದಂತಹ ಬಿಸಿಲಿಗೆ ಮಗು ಕಿರುಚಿಕೊಳ್ಳುತ್ತಿದ್ದರೂ ಆ ಅಮ್ಮ ತಲೆಕೆಡಿಸಿಕೊಳ್ಳಲಿಲ್ಲ. ಸ್ಥಳೀಯರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಒಬ್ಬ ವ್ಯಕ್ತಿ ದೆಹಲಿ ಪೊಲೀಸರಿಗೆ ಟ್ಯಾಗ್‌ ಮಾಡಿದ್ದಾನೆ. ಕೂಡಲೇ ಈ ಘಟನೆಗೆ ಪ್ರತಿಕ್ರಿಯಿಸಿದ ಪೊಲೀಸರು, ಮನೆಯ ಮೇಲ್ಛಾವಣಿಯಲ್ಲಿ ಬಾಲಕಿಯನ್ನು ಕಟ್ಟಿ ಅಮಾನುಷವಾಗಿ ಶಿಕ್ಷಿಸಿದ ತಾಯಿಯನ್ನು ಗುರುತಿಸಿದ್ದಾರೆ. ಇದೀಗ ಆಕೆಯ ವಿರುದ್ಧ  ಪ್ರಕರಣ ದಾಖಲು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!