Sunday, August 14, 2022

Latest Posts

ಗೋಡಂಬಿ ವ್ಯಾಪಾರಿಗಳ 28 ಲಕ್ಷ ರೂಪಾಯಿ ದರೋಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮುಂಡಗೋಡ:

ಗೋಡಂಬಿ ಖರೀದಿಗೆ ಬಂದ ಬೆಳಗಾವಿ ಚಿಕ್ಕೋಡಿಯ ಉದ್ಯಮಿಗಳ ದಾರಿ ತಪ್ಪಿಸಿದ ಅಪರಿಚಿತ ವ್ಯಕ್ತಿಗಳು ಸುಮಾರು 28 ಲಕ್ಷ ರೂಪಾಯಿ ಹಣ ಇದ್ದ ಬ್ಯಾಗ್ ಕಸಿದು ಪರಾರಿಯಾದ ಘಟನೆ ತಾಲೂಕಿನ ಮಳಗಿ ಜಲಾಶಯದ ಸಮೀಪ ಸಂಭವಿಸಿದೆ.
ಚಿಕ್ಕೋಡಿಯ ಶಿವನಗೌಡ ಪಾಟೀಲ್ ಮತ್ತು ಅಸ್ಲಂ ನದಾಫ್ ಎನ್ನುವವರು ಗೋಡಂಬಿ ಖರೀದಿಗೆ ಹೋಗುತ್ತಿರುವ ಸಂದರ್ಭದಲ್ಲಿ ಭೇಟಿಯಾದ ಆಗುಂತಕರ ಮಾತಿಗೆ ಮರುಳಾಗಿ ಜಲಾಶಯದ ವೀಕ್ಷಣೆಗೆ ತೆರಳಿದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಹಣ ದೋಚಿದ ಇಬ್ಬರು ಆರೋಪಿಗಳನ್ನು ಬೆನ್ನಟ್ಟಿ ಹೋದಾಗ ಸ್ವಲ್ಪ ದೂರದಲ್ಲಿ ಇನ್ನೂ ನಾಲ್ಕು ಜನರ ತಂಡ ಕಲ್ಲು ಬೀಸಿ ಬೆನ್ನಟ್ಟದಂತೆ ತಡೆದು ಪರಾರಿಯಾಗಿದ್ದಾರೆ.
ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಶ್ವಾನ ದಳದೊಂದಿಗೆ ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss