Wednesday, August 10, 2022

Latest Posts

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಸಿನೋಗಳ ಮೇಲೆ ಸಿಸಿಬಿ ದಾಳಿ: 104 ಜನ ವಶಕ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇಂದಿರಾನಗರ, ಸಂಪಿಗೆಹಳ್ಳಿ, ಹಲಸೂರಿನಲ್ಲಿರು ನಾಲ್ಕು ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದಾರೆ.
ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಕಂತೆ ಕಂತೆ ಹಣ‌ ಹಾಗೂ 104ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.‌
4 ಲಕ್ಷ ಹಣ ಜಪ್ತಿ
ಬಾಣಸವಾಡಿಯ ಗೌರಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನಲ್, ಕೇಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್, ಇಂದಿರಾನಗರದಲ್ಲಿರುವ ಕೇಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಕಿಂಗ್ಸ್ ವಿನ್ನರ್ ಕ್ಲಬ್, ಹಲಸೂರು ಠಾಣಾ ವ್ಯಾಪ್ತಿಯ ಸ್ಟಾರ್ ಲಯನ್ಸ್ ಕ್ಲಬ್, ಗೌರಿಸ್ಪೋರ್ಟ್ಸ್ ಮತ್ತು ರಿಕ್ರಿಯೇಷನಲ್ ಅಸೋಸಿಯೇಷನ್, ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಘಟನೆ ಸಂಬಂಧ 104 ಮಂದಿಯನ್ನು ಬಂಧಿಸಿ 4 ಲಕ್ಷ ಹಣ ಜಪ್ತಿ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss