Wednesday, August 17, 2022

Latest Posts

CAT 2020 ವೇಳಾ ಪಟ್ಟಿ ಬಿಡುಗಡೆ: ಆ.5ರಿಂದ ಆನ್ ಲೈನ್ ನೋಂದಣಿ ಪ್ರಾರಂಭ

ಹೊಸದಿಲ್ಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ಸ್ (IIM) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಎಟಿ (ಸಾಮಾನ್ಯ ಪ್ರವೇಶ ಪರೀಕ್ಷೆ 2020) ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನವೆಂಬರ್ 29ರಂದು ನಡೆಸಲು ನಿರ್ಧರಿಸಲಾಗಿದೆ.

ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಆಗಸ್ಟ್ 5 ರಂದು ಅಧಿಕೃತ ವೆಬ್‌ಸೈಟ್ iimcat.ac.in ನಲ್ಲಿ ಪ್ರಾರಂಭವಾಗಲಿದೆ ಮತ್ತು ಸೆಪ್ಟೆಂಬರ್ 16 ರಂದು ಮುಕ್ತಾಯಗೊಳ್ಳಲಿದೆ.

ಸಿಎಟಿ 2020 ಪರೀಕ್ಷೆಯ ಪ್ರವೇಶ ಪತ್ರವನ್ನು ಅ.28 ರಂದು ಬಿಡುಗಡೆ ಮಾಡಲಾಗುವುದು ಮತ್ತು ಅಭ್ಯರ್ಥಿಗಳು ಅದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನ.29 ರವರೆಗೆ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಜನವರಿ 2021ರ ಎರಡನೇ ವಾರದಲ್ಲಿ ಫಲಿತಾಂಶ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸಿಎಟಿ ಎನ್ನುವುದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಇದು Quantitative Ability (QA), Verbal Ability (VA) ಮತ್ತು Reading Comprehension (RC), Data Interpretation (DA) ಮತ್ತು Logical Reasoning (LR) ಗಳನ್ನು ಅಭ್ಯರ್ಥಿಗಳಿಗೆ ಭಾರತೀಯ ನಿರ್ವಹಣಾ ಸಂಸ್ಥೆ (IIM) ಈ ಪರೀಕ್ಷೆಯನ್ನು ನಡೆಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!