Sunday, August 14, 2022

Latest Posts

ಕ್ಯಾಚ್ ದಿ ರೈನ್: ದೇಶದಲ್ಲಿ ಶುರುವಾಗಲಿದೆ ಈ ಬಾರಿ ಹೊಸ ಅಭಿಯಾನ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈ ಬಾರಿ ಜೀವಜಲ‌ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮನ್ ಕೀ ಬಾತ್ ನಲ್ಲಿ ಇಂದು ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಜನತೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದ ಅವರು, ಮುಂದೆ ಮಳೆಗಾಲ ಆರಂಭವಾಗಲಿದೆ. ಮಳೆ ನೀರನ್ನು ಸಂಗ್ರಹಿಸಲು ‘ಕ್ಯಾಚ್ ದಿ ರೈನ್’ ಅಭಿಯಾನ ದೇಶದಾದ್ಯಂತ ಆರಂಭಿಸುವುದಾಗಿ ಹೇಳಿದರು.

ಈ ವರ್ಷ ಮಾಘ ಮಾಸದಲ್ಲಿ‌ ಹರಿದ್ವಾರದಲ್ಲಿ ಕುಂಭ ಮೇಳ ಆಯೋಜಿಸಲಾಗುತ್ತದೆ ಎಂದ ಪ್ರಧಾನಿ, ಈ ಬಗ್ಗೆ ಸಿದ್ಧತೆಗಳು ಆರಂಭವಾಗಿದೆ ಎಂದರು.

ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರುವ ಮೋದಿ, ಈ ಬಾರಿಯ ತಮ್ಮ ಭಾಷಣದಲ್ಲಿ ಪರಿಸರ ಉಳಿಸುವ ಕುರಿತು ಪಶ್ಚಿಮ ಬಂಗಾಳದ ಸುಜಿತ್ ಅವರ ಬಗ್ಗೆ ಪ್ರಸ್ತಾಪ ಮಾಡಿದರು. ಸುಜಿತ್, ವಿವಿಧ ರೀತಿಯ ನೀರನ್ನು ಹೇಗೆ ಸಂರಕ್ಷಣೆ ಮಾಡಬಹುದು ಎಂದು ತಿಳಿಸಿಕೊಟ್ಟಿದ್ದಾರೆ ಎಂದು ಉದಾಹರಿಸಿದ ಅವರು, ನೀರಿನ ಮೂಲದ ಸಂರಕ್ಷಣೆಗೆ ಮಹತ್ವದ ಕಾರ್ಯ ಮಾಡುತ್ತಿರುವ ಉತ್ತರಾಖಂಡ್‌ನ ಜಗದೀಶ್ ಅವರ ಕಾರ್ಯವನ್ನೂ ಶ್ಲಾಘಿಸಿದರು.

ಜಗದೀಶ್ ತಮ್ಮ ಗ್ರಾಮದಲ್ಲಿ ನೂರಾರು ಮರಗಳನ್ನು ನೆಟ್ಟಿದ್ದಾರೆ. ಇದು ನೀರಿನ ಮೂಲಗಳು ಪುನಃ ಭರ್ತಿಯಾಗುವಂತೆ ಮಾಡಿದೆ. ಇದೊಂದು ಮಾದರಿ ಕಾರ್ಯ ಎಂದರು. 100 ದಿನದ ಜಲಶಕ್ತಿ ಅಭಿಯಾನ ಕೇಂದ್ರ ಜಲಶಕ್ತಿ ಆಯೋಗದಿಂದ ಇದನ್ನು ಜಾರಿಗೊಳಿಸಲಿದೆ. ಇದರಿಂದ ಮಳೆ ನೀರನ್ನು ಇಂಗಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ‌ ಎಂದೂ ಮೋದಿ ಹೇಳಿದರು.

ಈ ವೇಳೆ ಸಂತ ರವಿದಾಸ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ, ರವಿದಾಸರ ಸಂದೇಶಗಳನ್ನು ನಾವು ರೂಢಿಸಿಕೊಳ್ಳಬೇಕು. ನಾವು ಸ್ವಚ್ಛ ಮನಸ್ಸಿನಿಂದ ನಮ್ಮ ಕೆಲಸಗಳನ್ನು ಮಾಡಿದರೆ ಯಶಸ್ಸು ಶತಸಿದ್ಧ ಎಂದು ಯುವಕರಿಗೆ ಕರೆ ನೀಡಿದರು.

ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಪ್ರಧಾನಿ ಮೋದಿ ಕೇರಳದ ಯೋಗೇಶ್ವರ್ ಅವರು ನಮೋ ಅಪ್ಲಿಕೇಶನ್‌ನಲ್ಲಿ ವಿಜ್ಞಾನದ ಇತ್ತೀಚಿನ ಆವಿಷ್ಕಾರಗಳ ಮಾಹಿತಿ ನೀಡಿರುವುದರ ಬಗ್ಗೆ ತಿಳಿಸಿದರು. ಹೈದರಾಬಾದ್‌ ಮೂಲದ ರೈತ ವೆಂಕಟ ರೆಡ್ಡಿ ಅವರ ಬಗ್ಗೆ ಮಾತನಾಡಿದ ಅವರು, ವಿಟಮಿನ್ ಯುಕ್ತ ಬೆಳೆಗಳನ್ನು ಬೆಳೆಯುವ ಮೂಲಕ ಹೊಲದಲ್ಲಿ ಪ್ರಯೋಗ ಮಾಡಿದ್ದು, ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ ಎಂದರು.

ಕೋಲ್ಕತ್ತಾ ಮೂಲದ ರಂಜನ್ ಬಾಬು ಅವರ ಆತ್ಮ ನಿರ್ಭರ ಭಾರತದಿಂದ ಆಗುವ ಲಾಭ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ ಬಾನಿನಲ್ಲಿ ನಾವು ನಿರ್ಮಿಸಿರುವ ತೇಜಸ್ ವಿಮಾನದ ಹಾರಾಟ, ದೇಶದಲ್ಲಿ ನಿರ್ಮಾಣವಾದ ಮೆಟ್ರೋ ರೈಲಿನ ಕೋಚ್ ಹಾಗೂ ಸ್ವದೇಶಿ ಕೋವಿಡ್ ಔಷಧಿ ವಿಶ್ವದ ವಿವಿಧ ದೇಶಗಳಿಗೆ ತಲುಪುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ದೆಹಲಿಯಲ್ಲಿ ಎಲ್‌ಇಡಿ ಬಲ್ಪ್ ಮಾಡುತ್ತಿದ್ದ ನೌಕರರು ಲಾಕ್ ಡೌನ್ ಸಮಯದಲ್ಲಿ ಊರಿಗೆ ಮರಳಿದರು. ಬಳಿಕ ಅವರು ತಮ್ಮ ಗ್ರಾಮದಲ್ಲಿಯೇ ಎಲ್‌ಇಡಿ ಬಲ್ಪ್ ಮಾಡುವ ಕಾರ್ಖಾನೆ ಪ್ರಾರಂಭಿಸಿ ಅವರು ಈಗ. ಮಾಲೀಕರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತದಲ್ಲಿನ ದೇವಾಲಯಳಲ್ಲಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಹಾಗೆಯೇ ಅಸ್ಸಾಂ ರಾಜ್ಯದಲ್ಲಿರುವ ದೇವಸ್ಥಾನಗಳಲ್ಲಿ ಅನೇಕ ಔಷಧೀಯ ಮೂಲಿಕೆ, ಸಸಿಗಳು ದೊರೆಯುತ್ತದೆ. ಮಂದಿರಗಳು ಕೂಡ ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ವಿಶ್ವದಲ್ಲಿಯೇ ಬಲಿಷ್ಠವಾದ ಸೇನೆಯನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿನ ಯುವಕರಿಗೆ ಭಾರತೀಯ ಸೇನೆಗೆ ಸೇರಲು ಉಚಿತವಾಗಿ ಅಗತ್ಯ ತರಬೇತಿ ನೀಡುತ್ತಿದ್ದು, ಪರೀಕ್ಷೆಗಳಿಗೆ ತಯಾರು ಮಾಡುವಲ್ಲಿ ಒಡಿಶಾದ ಶೀಲು ನಾಯಕ್ ಅವರ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದರು.

ಭಾಷಾ ಪ್ರೇಮವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ ಭಾರತದಲ್ಲಿನ ಪುರಾತನ ಭಾಷೆ ತಮಿಳಿನ ಬಗ್ಗೆ ಮಾತನಾಡಿದರು. ತಮಿಳು ಭಾಷೆ ಮಾತನಾಡುವ ಜನರು ವಿಶ್ವದ ಹಲವಾರು ದೇಶಗಳಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದರು. ತಮಿಳು ಭಾಷೆಯಲ್ಲಿನ ಸಾಹಿತ್ಯವೂ ಶ್ರೀಮಂತವಾಗಿದೆ ಎಂದು ತಿಳಿಸಿದರು.

ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲರ ಮೂರ್ತಿಯ ಬಳಿ ಪ್ರವಾಸಿಗರಿಗೆ ಸಂಸ್ಕೃತದಲ್ಲಿ ಮಾಹಿತಿ ನೀಡುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದ್ದು, ಕ್ರಿಕೆಟ್ ಕಾಮೆಂಟರಿಯನ್ನೂ ಸಹ ದೇವಭಾಷೆ ಸಂಸ್ಕೃತದಲ್ಲಿ ನೀಡುತ್ತಿದ್ದಾರೆ ಎಂದರು.

ಕೊರೋನಾ ಸೋಂಕಿನಿಂದ ಮುಂದೂಡಲ್ಪಟ್ಟ ಎಲ್ಲಾ ಪರೀಕ್ಷೆಗಳು ಮುಂದಿನ ಕೆಲವು ತಿಂಗಳಲ್ಲಿ ಪರೀಕ್ಷೆ ನಡೆಯಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪರ್ ಚರ್ಚಾ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss