ಸಾವು ಜಸ್ಟ್‌ ಮಿಸ್:‌ ಚೂರು ಯಾಮಾರಿದ್ರೂ ದೇಹ ಛಿದ್ರ ಛಿದ್ರ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲು ನಿಲ್ದಾಣದಲ್ಲಿ ನಡೆದಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ರೈಲು ಹಳಿ ದಾಟಲು ಶಾರ್ಟ್‌ಕಟ್‌ ತೆಗೆದುಕೊಂಡ ವ್ಯಕ್ತಿಯೊಬ್ಬ ಅಪಾಯಕ್ಕೆ ಸಿಲುಕಿದ್ದಾನೆ. ಸಾವಿನ ಅಂಚಿಗೆ ಹೋದ ಆತ ಅದೃಷ್ಟವಶಾತ್‌ ಪಾರಾಗಿದ್ದಾರೆ. ಹೃದಯ ಝಲ್‌ ಎನಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಹಳಿ ಮೇಲೆ ಇಳಿದಿದ್ದಾರೆ. ಅದೂ ಕೂಡಾ ನಿಂತಿದ್ದ ಗೂಡ್ಸ್‌ ರೈಲಿನಡಿ ತೂರಿ ಹೋಗಲು ಯತ್ನಿಸುವ ವೇಳೆ ರೈಲು ಚಲಿಸಿದೆ. ಕೂಡಲೇ ಆತ ಹಳಿ ಮಧ್ಯದಲ್ಲೇ ಮಲಗಿ ಜೀವ ಉಳಿಸಿಕೊಂಡಿದ್ದಾನೆ. ರೈಲು ಹೋದ ನಂತರ ಆ ವ್ಯಕ್ತಿ ಎದ್ದು ಬಂದಿದ್ದಾನೆ ಅಪಾಯ ತಪ್ಪಿದ ಕಾರಣ ಅಲ್ಲಿದ್ದವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!