ಹೊಸದಿಗಂತ ವರದಿ, ಕೆ.ಆರ್.ಪೇಟೆ:
ಸಂಕಷ್ಠ ಸೂತ್ರ ರಚನೆಯಿಂದ ಮಾತ್ರ ಕಾವೇರಿ ಜಲ ವಿವಾದಕ್ಕೆ ಶಾಶ್ವತ ಪರಿಹಾರ ಸಾಧ್ಯ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.
ಪಟ್ಟಣದಲ್ಲಿರುವ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ನಿವಾಸದಲ್ಲಿ ಮಾಜಿ ಸಚಿವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು ಕಾವೇರಿ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು.
ಕಾವೇರಿ ವಿಚಾರದಲ್ಲಿ ಜಿಲ್ಲೆಯ ಜನ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ. ಒಬ್ಬ ಸಂಸದೆಯಾಗಿ ನಾನು ಆರೀತಿ ಮಾತನಾಡಲಾಗುವುದಿಲ್ಲ. ಜನರನ್ನು ಮೆಚ್ಚಿಸಲು ಒಂದು ಹನಿ ನೀರನ್ನು ಬಿಡುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಅದರ ಅನುಸರಣೆ ಕಷ್ಠ ಸಾಧ್ಯ. ಕಾವೇರಿ ವಿಚಾರದಲ್ಲಿ ಪ್ರಧಾನ ಮತ್ರಿಗಳು ಮದ್ಯ ಪ್ರವೇಶಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಪ್ರದಾನಿಗಳ ಮಧ್ಯ ಪ್ರವೆಶದಿಂದ ಕಾವೇರಿ ಸಮಸ್ಯೆ ಪರಿಹಾರವಾಗುವುದಿದ್ದರೆ ಅಂದು ಎಂದೂ ಸಾಧ್ಯವಾಗುತ್ತಿತ್ತು. ಈ ಹಿಂದೆ ಮನಮೋಹನ್ ಸಿಂಗ್ ದೇಶದ ಪ್ರದಾನಿಯಾಗಿದ್ದ ಸಂದರ್ಬದಲ್ಲಿ ಅಂದು ಕೇಮದ್ರ ಸಚಿವರಾಗಿದ್ದ ಅಂಬರೀಶ್ ಕಾವೇರಿಗಾಗಿ ಸಚಿಉವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಇಂದು ಕಾವೇರಿ ವಿಚಾರದಲ್ಲಿ ಪ್ರದಾನಿ ಮಧ್ಯ ಪ್ರವೆಶಿಸಬೇಕು ಎನ್ನುತ್ತಿರುವವರು ಅಂದು ಏಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ ಸುಮಲತಾ ಪ್ರಧಾನಿಗಳ ಮದ್ಯ ಪ್ರವೇಶದಿಂದ ಸಮಸ್ಯೆ ಬಗೆಹರಿಯುವಂತಿದ್ದರೆ ಅಂದಿನ ಪ್ರಧಾನಿಗಳೇ ಮದ್ಯ ಪ್ರವೇಶಿಸುತ್ತಿದ್ದರೆಂದರು.