Thursday, August 11, 2022

Latest Posts

ಮಹಿಳಾ ಉದ್ಯೋಗಿ ಅಪಘಾತ ಪ್ರಕರಣ: ಸಿಬಿಐ ತನಿಖೆಗೆ ಕೃಷಿ ಸಚಿವರಿಗೆ ಮನವಿ

ಹೊಸ ದಿಗಂತ ವರದಿ, ಧಾರವಾಡ:

ಕೃಷಿ ವಿವಿಯ ಮಹಿಳಾ ಉದ್ಯೋಗಿಗಳ ಅಪಘಾತ ಪ್ರಕರಣ ಸಿಬಿಐ ಅಥವಾ ಸಿಓಡಿ ತನಿಖೆಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಕೃಷಿ ಸಚಿವ ಬಿ.ಸಿ.ಪಾಟೀಲಗೆ ಶನಿವಾರ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಮಾತನಾಡಿ, ಕೃಷಿ ವಿವಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಇಲ್ಲ. ಕುಲಪತಿಗಳ ಆಪ್ತ ಕಾರ್ಯದರ್ಶಿ ಮುಲ್ಲಾ ದೈಹಿಕ-ಮಾನಸಿಕ, ಲೈಂಗಿಕ ಕಿರುಕಳ ನೀಡುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ಅಂಕೋಲಾ ಬಳಿ ನಡೆದ ಅಪಘಾದಲ್ಲಿ ಮೇಗಾ ಸಿಂಗನಾಥ್, ರೇಖಾ ಕೊಟ್ಟೂರು ಮೃತಪಟ್ಟಿದ್ದು, ಅವರನ್ನು ಕುಲಪತಿ ಆಪ್ತ ಕಾರ್ಯದರ್ಶಿ ಬೆದರಿಸಿ ಕರೆದುಕೊಂಡು ಹೋಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಲು ಒತ್ತಾಯಿಸಿದರು.
ಕುಲಪತಿಗಳ ಆಪ್ತ ಕಾರ್ಯದರ್ಶಿ ಮುಲ್ಲಾ ಅವರನ್ನು ಕರ್ತವ್ಯದಿಂದ ಅಮಾನತ್ತು ಮಾಡಬೇಕು. ಅಲ್ಲದೇ, ಮೃತ ಮಹಿಳಾ ಉದ್ಯೋಗಿಗಳ ಕುಟುಂಬಕ್ಕೆ ಸೂಕ್ತ ಪರಿಹಾರದ ಜತೆಗೆ ಸದಸ್ಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವ ಬಿ.ಸಿ.ಪಾಟೀಲ, ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ತನಿಖೆಯು ನಡೆಯತ್ತದೆ. ವಿವಿಯಲ್ಲೂ ತನಿಖೆಗೆ ಸಮಿತಿ ರಚಿಸಿದೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂಘಟನೆ ಕಾರ್ಯಕರ್ತರು ಪೊಲೀಸರು ತಡೆದರು. ಈ ವೇಳೆ ಕಾರ್ಯಕರ್ತರ-ಪೊಲೀಸರ ಮಧ್ಯ ಕೆಲಕಾಲ ವಾಗ್ವಾದ ನಡೆಯಿತು.
ಈ ಸಂದರ್ಭದಲ್ಲಿ ಸಂಘಟನೆ ಗೌರವ ಅಧ್ಯಕ್ಷ ಲಕ್ಷಣ ದೊಡಮನಿ, ಚಂದ್ರು ಅಂಗಡಿ, ಮಂಜು ಸುತಗಟ್ಟಿ, ಅಲ್ತಾಫ್ ಜಾಲಗಾರ, ಕರಿಯಪ್ಪ ಮಾಳಗಿಮನಿ, ಪರಶುರಾಮ ದೊಡಮನಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss