Thursday, August 18, 2022

Latest Posts

CBSE 10 ಮತ್ತು 12 ನೇ ತರಗತಿ ಪರೀಕ್ಷಾ ದಿನಾಂಕ ಇಂದು ಪ್ರಕಟ: ಡಾ. ರಮೇಶ್ ಪೊಕ್ರಿಯಾಲ್ ನಿಶಾಂಕ್

ಹೊಸದಿಲ್ಲಿ: ಇಂದು CBSE 10ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷಾ ದಿನಾಂಕವನ್ನು ಇಂದು ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್ ಪೊಕ್ರಿಯಾಲ್ ನಿಶಾಂಕ್ ಪ್ರಕಟಿಸಲಿದ್ದಾರೆ.

ಕೊರೋನಾ ಲಾಕ್ ಡೌನ್ ನಿಂದ ಮುಂದೂಡಿರುವ ಪರೀಕ್ಷೆಗಳನ್ನು ಜುಲೈ 1ರಿಂದ 15ರವರೆಗು ನಡೆಸಲಾಗುತ್ತದೆ ಎಂದು ತಿಳಿಸಿದ್ದರು. ಕಳೆದ ವಾರ JEE ಮತ್ತು NEET ಪರೀಕ್ಷೆಗಳ ದಿನಾಂಕ ಪ್ರಕಟಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ CBSE 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಡಾ. ರಮೇಶ್ ಪೊಕ್ರಿಯಾಲ್ ಟ್ವೀಟ್ ಮಾಡಿದ್ದಾರೆ.

JEE ಪರೀಕ್ಷೆಗಳು ಜುಲೈ 18, 20,21,22 ಮತ್ತು 23ರಂದು ನಡೆಯಲಿದ್ದು, ವೈದ್ಯಕೀಯ ಪೂರ್ವಭಾವಿ NEET ಪರೀಕ್ಷೆಯು ಜುಲೈ 26ರಂದು ನಡೆಯಲಿದೆ ಎಂದು ತಿಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!