ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆ : ಎಲ್ಲಾ ಶಾಲೆಗಳಿಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇಂದು 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸಿಬಿಎಸ್‌ಇ ಮಾರ್ಗಸೂಚಿಗಳ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಶಾಲೆಗಳು ಉತ್ತರ ಪತ್ರಿಕೆಗಳನ್ನು ಅಂಚೆ ಸೇವೆಗಳ ಮೂಲಕ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಕಳುಹಿಸುವ ಮೊದಲು ಉತ್ತರ ಪುಸ್ತಕಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಳಿಸತಕ್ಕದ್ದು ಎಂದು ಹೇಳಿದೆ.

ಒಂದು ವೇಳೆ ಸೀಲ್ ಮಾಡಿದ ಉತ್ತರ ಪುಸ್ತಕಗಳನ್ನು ಯಾರಾದರೂ ವೈಯಕ್ತಿಕವಾಗಿ ಅಥವಾ ನಗರ ಸಂಯೋಜಕರ ಸಹಾಯದಿಂದ ಪ್ರಾದೇಶಿಕ ಕಚೇರಿಗೆ ತಲುಪಿಸಿದರೆ, ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ ಎಂದು ಮಂಡಳಿ ತಿಳಿಸಿದೆ.

ಸಿಬಿಎಸ್‌ಇ ಮಂಡಳಿಯು ಪರೀಕ್ಷೆಯ ಸಮಯದಲ್ಲಿ ಮಂಡಳಿ ಅಥವಾ ಯಾವುದೇ ಇತರ ಅಧಿಕಾರಿಗಳೊಂದಿಗೆ ಸಂವಹನಕ್ಕಾಗಿ ವಾಟ್ಸಪ್ ಸಂದೇಶಗಳನ್ನು ಕಳಿಸಬಾರದು ಎಂದು ಶಾಲೆಗಳಿಗೆ ಎಚ್ಚರಿಕೆ ನೀಡಿದೆ.

ಬೋರ್ಡ್ ಪರೀಕ್ಷೆಯ ಕುರಿತು ಯಾವುದೇ ಸಂದೇಹಗಳಿದ್ದಲ್ಲಿ ಸಿಬಿಎಸ್‌ಇ ನೀಡಿರುವ ಅಧಿಕೃತ ಲಿಂಕ್ ಬಳಸಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು ಎಂದು ಮಂಡಳಿಯು ಸೂಚನೆ ಕೊಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!