ಸಿಬಿಎಸ್‌ಸಿ 10 ಮತ್ತು 12ನೇ ತರಗತಿ ಪರೀಕ್ಷೆ ದಿನಾಂಕ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಸಿಬಿಎಸ್‌ ಸಿ 10 ಮತ್ತು 12ನೇ ತರಗತಿಯ ಎರಡನೇ ಅವಧಿಯ ಪರೀಕ್ಷೆಗಳನ್ನು ಏ.26ರಿಂದ ಪ್ರಾರಂಭಿಸಲು ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ತೀರ್ಮಾನಿಸಿದೆ.
ಕೊರೋನಾ ಸೋಂಕಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಆಫ್‌ ಲೈನ್‌ ನಲ್ಲಿ ನಡೆಸಲಿದೆ.
ಈ ಹಿಂದೆ ನಡೆಸಿದ ಪರೀಕ್ಷೆಗಳ ಮಾದರಿಯಲ್ಲಿ ಈ ವರ್ಷವೂ ಪರೀಕ್ಷೆ ನಡೆಯಲಿದೆ. ಸಿಬಿಎಸ್‌ಸಿ 10 ಮತ್ತು 12ನೇ ತರಗತಿ ಥಿಯರಿ ಪರೀಕ್ಷೆಗಳು ಏ.26ರಿಂದ ಪ್ರಾರಂಭವಾಗಲಿದ್ದು, ಶೀಘ್ರದಲ್ಲಿ ವೇಳಪಟ್ಟಿ ಪ್ರಕಟಗೊಳ್ಳಲಿದೆ.
ಕರ್ನಾಟಜದಲ್ಲಿ ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಿರುವ ಬಗ್ಗೆ ಘೋಷಣೆ ಮಾಡಲಾಗಿದೆ. ಏ.16ರಿಂದ ಪರೀಕ್ಷೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!