ಹೊಸದಿಗಂತ ಆನ್ ಲೈನ್ ಡೆಸ್ಕ್:
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿ ಮತ್ತೆ ಮೂವರನ್ನು ಎಸ್ಐಟಿ ತಂಡ ವಶಕ್ಕೆ ಪಡೆದಿದ್ದು, ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಎಸ್ಐಟಿ ತನಿಖಾ ತಂಡದಿಂದ ಮಾಹಿತಿ ಲಭ್ಯವಾಗಿದೆ.
ಈ ಮೂವರಲ್ಲಿ ಇಬ್ಬರು ಯುವಕರು ಓರ್ವ ಯುವತಿ ಇದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಸಂಜೆ 7 ಗಂಟೆ ಸುಮಾರಿಗೆ ಮಡಿವಾಳದ ಟೆಕ್ನಿಕಲ್ ಸೆಂಟರ್ಗೆ ಈ ಮೂವರನ್ನೂ ಕರೆತರಲಾಗುತ್ತದೆ.
ಭದ್ರತೆಗಾಗಿ ಈಗಾಗಲೇ 1 ಕೆಎಸ್ಆರ್ಪಿ ತುಕಡಿಯನ್ನ ನಿಯೋಜಿಸಲಾಗಿದೆ. ಜೊತೆಗೆ 3 ಜನ ಮಹಿಳಾ ಸಿಬ್ಬಂದಿಯನ್ನೂ ತನಿಖಾ ತಂಡ ನಿಯೋಜನೆ ಮಾಡಲಾಗಿದೆ ಎಂದು ಎಸ್ಐಟಿ ತನಿಖಾ ತಂಡ ಮಾಹಿತಿ ನೀಡಿದೆ.