ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಬಂಡುಕೋರರು ಕದನ ವಿರಾಮ ಒಪ್ಪಂದದ ಭಾಗವಾಗಿ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಗೆ ಹಸ್ತಾಂತರಿಸಿದೆ.
20 ವರ್ಷದ ಓಮರ್ ವೆಂಕರ್ಟ್, ಒಮರ್ ಶೆಮ್ ಟೋವ್ ಮತ್ತು ಎಲಿಯಾ ಕೊಹೆನ್ ಅವರನ್ನು ಹಮಸ್ ಹಸ್ತಾಂತರಿಸಿದೆ.
ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು , ಸ್ನೇಹಿತರು ಘೋಷಣೆ ಕೂಗಿ ಸಂಭ್ರಮ ಪಟ್ಟರು.
ಇದಕ್ಕೂ ಮುನ್ನಾ ದಕ್ಷಿಣ ಗಾಜಾ ನಗರವಾದ ರಫಾದಲ್ಲಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಆರನೇ ಒತ್ತೆಯಾಳು 36 ವರ್ಷದ ಹೆಶಮ್ ಅಲ್-ಸಯೀದ್ ಕೂಡ ಶನಿವಾರ ಬಿಡುಗಡೆಯಾಗಲಿದ್ದಾರೆ.