ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಬೀದರ:
ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇಯ ಆರಾಧನಾ ಮಹೋತ್ಸವವನ್ನು
ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಉತ್ತರಾರಾಧನೆ ಇಂದು ಬೆಳಗ್ಗೆ 5 ಗಂಟೆಗೆ ಸುಪ್ರಭಾತ, ಅಷ್ಟೋತ್ತರ ಸೇವಾ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಹಾಗೂ ವಿಶೇಷ ಹೂವಿನ ಹಾಗೂ ತುಳಸಿಯ ಅಲಂಕಾರ ಮಾಡಲಾಗಿತ್ತು. ಉತ್ತರಾರಾಧನೆ ನಿಮಿತ್ತ ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ಅಲಂಕಾರ ಬ್ರಾಹ್ಮಣರ ಭೋಜನ ನಂತರ ಸಾರ್ವಜನಿಕರಿಗೆ ಕೊವಿಡ್ ನಿಯಮ ಪಾಲನೆಯ ಜೊತೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ಭಕ್ತಾದಿಗಳು ಸರತಿಯಲ್ಲಿ ಬಂದು ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಹರಿವಾಯು ಗುರುಗಳ ಕೃಪೆಗೆ ಪಾತ್ರರಾದರು.
ಪೂಜಾ ಕೈಂಕರ್ಯಗಳು ಶ್ರೀಮಠದ ಅರ್ಚಕರಾದ ಬಿಂದುಮಾಧವಾಚಾರ್ಯ, ಮಿಲಿಂದಾಚಾರ್ಯ ನೆರವೇರಿಸಿದರು. ಶ್ರೀ ಗುರುರಾಜ ಸೇವಾ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ದರ್ಶನಕ್ಕೆ ಬಂದಿದ್ದ ಭಕ್ತಾದಿಗಳ ದರ್ಶನ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು.