ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಕ್ರಿಕೆಟ್ನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ ಕಿಚ್ಚ ಸುದೀಪ್ ಇದೀಗ ಚೆಸ್ ಆಡಲು ಮುಂದಾಗಿದ್ದಾರೆ.
ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ವಿರುದ್ಧ ಕಿಚ್ಚ ಸುದೀಪ್ ಚೆಸ್ ಆಡಲಿದ್ದಾರೆ.
ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್ ಡಾಟ್ ಕಾಮ್ ಸೆಲೆಬ್ರಿಟಿ ಆವೃತ್ತಿ ನಡೆಸುತ್ತಿದೆ. ನಾಳೆ ಸಂಜೆ 5 ರಿಂದ 8 ಗಂಟೆವರೆಗೆ ಸ್ಪರ್ಧೆ ನಡೆಯಲಿದೆ.
ನಟರಾದ ಕಿಚ್ಚ ಸುದೀಪ್, ಅಮೀರ್ ಖಾನ್, ರಿತೇಶ್ ದೇಶ್ಮುಖ್, ಆಟಗಾರ ಯಜುವೇಂದ್ರ ಚಹಾಲ್, ಗಾಯಕಿ ಅನನ್ಯ ಬಿರ್ಲಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಕೋವಿಡ್ ನಿಧಿಗೆ ದೇಣಿಗೆ ಸಂಗ್ರಹಿಸಲು ಸ್ಪರ್ಧೆ ಆಯೋಜಿಸಲಾಗಿದೆ. ಚೆಸ್ ಡಾಟ್ ಕಾಮ್ ಇಂಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಸ್ಪರ್ಧೆ ನೇರ ಪ್ರಸಾರವಾಗಲಿದೆ.