CCL 2023 | ಶುರುವಾಯ್ತು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಫೀವರ್, ಬೌಲಿಂಗ್ ಮಾಡಲಿದೆ ಕರ್ನಾಟಕ ಟೀಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ‍್ಸ್ ಹಾಗೂ ಕರ್ನಾಟಕ ಬುಲ್ಡೋಜರ‍್ಸ್ ಎದುರಾಗಿವೆ.

ರಾಯ್‌ಪುರ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಬೆಂಗಾಲ್ ಟೈಗರ‍್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರತಿ ಬಾರಿ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಿದ್ದು, ಈ ಬಾರಿ ಸುದೀಪ್ ಬದಲು ಯುವ ನಟ ಪ್ರದೀಪ್ ಕ್ಯಾಪ್ಟನ್ ಆಗಿದ್ದಾರೆ. ಈ ಬಾರಿ ನಟ ಗಣೇಶ್ ಹಾಗೂ ಶಿವರಾಜ್‌ಕುಮಾರ್ ಕೂಡ ಫೀಲ್ಡ್‌ಗೆ ಇಳಿಯಲಿದ್ದು, ತಂಡಕ್ಕೆ ಮತ್ತಷ್ಟು ಬಲ ಬಂದಿದೆ.

ತಂಡದಲ್ಲಿ ಯಾರ‍್ಯಾರಿದ್ದಾರೆ?

ಪ್ರದೀಪ್, ರಾಜೀವ್ ಹೆಚ್, ಕಿಚ್ಚ ಸುದೀಪ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್,ಸೌರವ್ ಲೋಕೇಶ್, ಪ್ರತಾಪ್, ಪ್ರಸನ್ನ, ಶಿವರಾಜ ಕುಮಾರ್, ಗಣೇಶ್, ಕೃಷ್ಣ,  ಚಂದನ್, ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನಂದ ಕಿಶೋರ್, ಸಾಗರ್ ಗೌಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!