ಹೊಸ ದಿಗಂತ ವರದಿ, ವಿಜಯಪುರ:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭ್ರಷ್ಟಾಚಾರದ ಹಣದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದರು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಲೂಟಿ ಮಾಡಿದ ಹಣದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದರು. ಭ್ರಷ್ಟಾಚಾರ ಹಣದಲ್ಲಿ ಹೊಸ ಪಕ್ಷ ಕಟ್ಟಲು ಎಚ್.ಡಿ. ಕುಮಾರಸ್ವಾಮಿ ಪ್ಲಾನ್ ಮಾಡಿದ್ದರು, ಬಿಜೆಪಿಗೆ ಬುದ್ಧಿ ಕಲಿಸಲು ಎಚ್ಡಿಕೆ ಮುಂದಾಗಿದ್ದರು ಎಂದರು.
ನಾನು ಲೂಟಿ ಮಾಡಿದ್ದರೂ ಭ್ರಷ್ಟಾಚಾರನೇ. ಭ್ರಷ್ಟಾಚಾರ ಮಾಡುವವರೇ ಭ್ರಷ್ಟಾಚಾರರು. ನಮ್ಮ ಮನೆಯಲ್ಲಿ ಏನಿಲ್ಲ, ಅದಕ್ಕೆ ಐಟಿ ರೇಡ್ ಆಗಿಲ್ಲ. ಐಟಿ ರೇಡ್ ನಲ್ಲಿ ಯಾರದೇ ಹಸ್ತಕ್ಷೇಪ ಇಲ್ಲ. ಯತ್ನಾಳ ಸತ್ಯ ಹೇಳಿದಕ್ಕೆ ಐಟಿ ರೇಡ್ ಆಗಿದೆ ಎಂದರು. ಬಿಟಿಎಸ್ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ಇದೆ. ಅವರ ಮೇಲೆ ದಾಳಿ ಮಾಡಿದ್ದರೂ ಕೋಟ್ಯಾಂತರ ಹಣ ಸಿಗುತ್ತದೆ ಎಂದರು.
ಬಿಎಸ್ವೈ, ಡಿಕೆಶಿ, ಎಚ್ಡಿಕೆ, ಸಿದ್ದು ಯಾರೇ ಲೂಟಿ ಮಾಡಿದ್ದರು ಭ್ರಷ್ಟಾಚಾರನೇ ಎಂದು ಹೇಳಿದರು.