ʼರಾಜೀವ್ ಗಾಂದಿ ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆ ಆದೇಶ ಮರುಪರಿಶೀಲಿಸುವಂತೆ ಮನವಿ ಮಾಡಿದ ಕೇಂದ್ರʼ: ಏನಿದು ಮರುಪರಿಶೀಲನಾ ಅರ್ಜಿ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಇನ್ನೂ ಜೈಲಿನಲ್ಲಿರುವ ಎಲ್ಲಾ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ನವೆಂಬರ್ 11 ರಂದು ಆದೇಶ ನೀಡಿತ್ತು. ಆ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಏನಿದು ಮರು ಪರಿಶೀಲನಾ ಅರ್ಜಿ? ಯಾವ ಸಂದರ್ಭದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು ಎಂಬುದರ ಕುರಿತಾಗಿನ ವಿವರಣೆ ಇಲ್ಲಿದೆ.

ಮರು ಪರಿಶೀಲನಾ ಅರ್ಜಿ ಎಂದರೇನು?
ಹೆಸರೇ ಸೂಚಿಸುವಂತೆ ಇದು ಮರು-ಪರಿಶೀಲನೆ ಅಂದರೆ ಸುಪ್ರಿಂ ಕೋರ್ಟ್‌ ಈಗಾಗಲೇ ನೀಡಿರುವ ಆದೇಶವನ್ನು ಅಥವಾ ತೀರ್ಪನ್ನು ಪುನಃ ಪರಿಶೀಲನೆಗೆ ಒಳಪಡಿಸಬೇಕು ಎಂಬಂತೆ ಕೋರಿ ಸಲ್ಲಿಸುವ ಅರ್ಜಿಯಾಗಿದೆ. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯ ನೀಡಿದ ಆದೇಶದಲ್ಲಿ ನಿರ್ದಿಷ್ಟ ದೋಷಗಳಿವೆ ಎಂದು ಅರ್ಜಿದಾರರು ಆದೇಶವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅರ್ಜಿದಾರರನ್ನು ಆಲಿಸಿ ಮರುಪರಿಶೀಲನೆ ಸ್ವೀಕಾರಾರ್ಹವೇ ಎಂದಯ ನಿರ್ಧರಿಸಲಾಗುತ್ತದೆ.

ಪ್ರಸ್ತುತ ರಾಜೀವ್‌ ಗಾಂಧಿ ಹಂತಕರ ಬಿಡುಗಡೆ ವಿಚಾರದಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ಪೀಠವು ಅಪರಾಧಿಗಳಿಗೆ ವಿನಾಯತಿ ನೀಡಿದ ಆದೇಶವನ್ನು ಆಲಿಸದೆ ಅಂಗೀಕರಿಸಲಾಗಿದೆ ಎಂದು ಕೇಂದ್ರವು ವಾದಿಸಿದೆ.

ಯಾವ ಸಂದರ್ಭಗಳಲ್ಲಿ ಮರುಪರಿಶೀಲನಾ ಅರ್ಜಿಯನ್ನು ಪರಿಗಣಿಸಬಹುದು?

ಸಂವಿಧಾನದ ರಕ್ಷಕನಾಗಿರುವ ಸುಪ್ರಿಂಕೋರ್ಟ್‌ ಭಾರತದ ಸರ್ವೋಚ್ಛ ನ್ಯಾಯಾಲಯವಾಗಿರುವುದರಿಂದ ಅದು ನೀಡುವ ಆದೇಶವು ಅಷ್ಟೇ ನಿಖರವೂ ಕಾನೂನಾತ್ಮಕವಾಗಿಯೂ ಇರುತ್ತದೆ. ಆದರೂ ಕೆಲವೊಮ್ಮೆ ಕೆಲ ನಿರ್ದಿಷ್ಟ ತಪ್ಪುಗಳಾಗುತ್ತವೆ. ಅಂತಹ ಸಂದರ್ಭಗಳಲ್ಲಿ ನಿರ್ದಿಷ್ಟ, ಸೂಕ್ತ ಕಾರಣಗಳ ಆಧಾರದ ಮೇಲೆ ಮಾತ್ರ ಮರುಪರಿಶೀಲನಾ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.

ಪೇಟೆಂಟ್‌ ದೋಷ ಅಥವ ಒಂದು ಸ್ಪಷ್ಟವಾಧ ದೋಷಗಳು ಅಥವಾ ಗಂಭಿರ ದೋಷಗಳು ನ್ಯಾಯಾಂಗದಿಂದ ಸಂಭವಿಸಿದಲ್ಲಿ ಮಾತ್ರ ಕೋರ್ಟ್ ತನ್ನ ತೀರ್ಪುಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದೆ.‌ ಸಣ್ಣ ಪುಟ್ಟ ದೋಷಗಳನ್ನು ಕೋರ್ಟ್‌ ಮರುಪರಿಶೀಲನೆಗೆ ಸೂಕ್ತಕಾರಣಗಳೆಂದು ಸ್ವೀಕರಿಸುವುದಿಲ್ಲ.

2013ರ ಆದೇಶವೊಂದಲ್ಲಿ ಸುಪ್ರಿಂ ಕೋರ್ಟ್‌ ತೀರ್ಪಿನ ಮರು ಪರಿಶೀಲನೆಗೆ ಮೂರು ಆಧಾರಗಳನ್ನು ನೀಡಿದೆ 1) ಹೊಸ ಮತ್ತು ಪ್ರಮುಖ ವಿಷಯ ಅಥವಾ ಪುರಾವೆಗಳ ಆವಿಷ್ಕಾರ, ಅಂದರೆ ಆದೇಶದ ನಂತರ ವಿಚಾರಣೆಯ ಸಂದರ್ಭದಲ್ಲಿ ಹಾಜರುಪಡಿಸಲು ಸಾಧ್ಯವಾಗದ ಹೊಸ ಪುರಾವೆಗಳು ಅಥವಾ ಸಾಕ್ಷ್ಯಗಳು ಆವಿಷ್ಕಾರವಾದಾಗ. 2) ದಾಖಲೆಯಲ್ಲಿ ಕಂಡುಬರುವ ದೋಷ ಅಥವಾ ತಪ್ಪು 3) ಇತರ ಸೂಕ್ತ ಕಾರಣಗಳು.
ಈ ಮೂರು ಅಂಶಗಳ ಆಧಾರದಲ್ಲಿ ಮರುಪರಿಶೀಲನೆ ಪರಿಗಣೆಯಾಗುತ್ತದೆ.

ಸುಪ್ರಿಂ ಮರು ಪರಿಶೀಲನೆ ನಡೆಸುವುದು ಸಾಮಾನ್ಯವೇ?
ಸುಪ್ರೀಂ ಕೋರ್ಟ್ ವಿಮರ್ಶೆಗಳನ್ನು ಒಪ್ಪಿಕೊಳ್ಳುವುದು ಮತ್ತು ವಿಮರ್ಶೆಯಲ್ಲಿ ಮೂಲ ನಿರ್ಧಾರವನ್ನು ರದ್ದುಗೊಳಿಸುವುದು ಅಪರೂಪ.

ಶಬರಿಮಲೆ ಪ್ರಕರಣದಲ್ಲಿ ತನ್ನ 2018 ರ ತೀರ್ಪನ್ನು ಪರಿಶೀಲಿಸಲು ಸುಪ್ರಿಂ ಒಪ್ಪಿಕೊಂಡಿತು ಆದರೆ ರಫೇಲ್ ಒಪ್ಪಂದದ ತನಿಖೆಯನ್ನು ಕೋರಿ ತೀರ್ಪನ್ನು ಪರಿಶೀಲಿಸಲು ನಿರಾಕರಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!