ಕೇಂದ್ರದ ಮಧ್ಯ ಪ್ರವೇಶ- ಜೈನ ಪವಿತ್ರಕ್ಷೇತ್ರ ʼಸಮ್ಮೇದ ಶಿಖರ್ಜಿʼಯಲ್ಲಿ ಪ್ರವಾಸೋದ್ಯಮಕ್ಕೆ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಹಳ ಚರ್ಚೆಗೆ ಕಾರಣವಾಗಿದ್ದ ಸಮ್ಮೇದ ಶಿಖರ್ಜಿ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. ಜೈನರ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯಿರುವ ಪರಸ್ನಾಥ ಬೆಟ್ಟಗಳಲ್ಲಿ ಎಲ್ಲಾ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ತಡೆಯಾಜ್ಞೆ ನೀಡಿದ್ದು ಕ್ಷೇತ್ರದ ಪಾವಿತ್ರ್ಯತೆ ಉಳಿಸಲು ಅಗತ್ಯವಿರೋ ಎಲ್ಲಾ ಕ್ರಮ ವಹಿಸುವಂತೆ ಝಾರ್ಖಂಡ್‌ ಸರ್ಕಾರಕ್ಕೆ ಸೂಚಿಸಿದೆ.

ಧಾರ್ಮಿಕ ಸ್ಥಳ “ಶ್ರೀ ಸಮ್ಮೇದ್ ಶಿಖರ್ಜಿ” ಅನ್ನು ಪ್ರವಾಸಿ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುವ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಜೈನ ಸಮುದಾಯ ವ್ಯಾಪಕವಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸಿತ್ತು. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿತ್ತು. ಇದೀಗ ಕೇಂದ್ರವು ಪ್ರವಾಸೋದ್ಯಮ ಚಟುವಟಿಕೆಗಳನ್ನು ತಡೆ ಹಿಡಿದಿದ್ದು ಈ ಸಮಸ್ಯೆಯನ್ನು ವಿಚಾರಿಸಲು ಸಮಿತಿಯೊಂದನ್ನು ರಚಿಸಿದೆ.

ಜೈನ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಪವಿತ್ರ ಸ್ಥಳವಾಗಿರುವ ‘ಸಮ್ದ್ ಶಿಖರ್ಜಿ ಪರ್ವತ ಕ್ಷೇತ್ರದ’ ಪಾವಿತ್ರ್ಯತೆಯನ್ನು ಕಾಪಾಡಲು ಕೇಂದ್ರವು ಬದ್ಧವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಧರ್ಮೇಂದ್ರ ಯಾದವ್ ಹೇಳಿದ್ದಾರೆ.

ಸಮ್ಮೇದ ಶಿಖರ್ಜಿ ಕ್ಷೇತ್ರದ ವಿವಾದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಈ ವೀಡಿಯೋ  ನೋಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!