Thursday, March 4, 2021

Latest Posts

‘118 ಅರ್ಜುನ್ ಮಾರ್ಕ್ ಟ್ಯಾಂಕ್​’ ಅಭಿವೃದ್ಧಿಗೆ ಕೇಂದ್ರ ರಕ್ಷಣಾ ಇಲಾಖೆ ಅನುಮತಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮೇಕ್​ ಇನ್​ ಇಂಡಿಯಾ ಭಾಗವಾಗಿ ರಕ್ಷಣಾ ಕ್ಷೇತ್ರಕ್ಕೆ ಈಗಾಗಲೇ ಯುದ್ಧ ಟ್ಯಾಂಕ್‌ ‘ಅರ್ಜುನ-ಎಂಕೆ1ಎ’ ಸೇರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಇದೀಗ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ 118 ಅರ್ಜುನ್ ಮಾರ್ಕ್ ಟ್ಯಾಂಕ್​ ಅಭಿವೃದ್ಧಿಪಡಿಸಲು ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿದೆ.
ಭಾರತೀಯ ಸೇನೆಗೆ 118 ಅರ್ಜುನ್ ಮಾರ್ಕ್ 1 ಎ ಟ್ಯಾಂಕ್​​ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದ 30 ತಿಂಗಳೊಳಗೆ 58 ಟನ್ ತೂಕದ ಡಿಆರ್​ಡಿಒ ಅಭಿವೃದ್ಧಿಪಡಿಸಿದ ಟ್ಯಾಂಕ್​ಗಳು ವಿತರಣೆಗೆ ಸಿದ್ಧವಾಗಲಿವೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ಇತಿಹಾಸ ಈ ಅರ್ಜುನ್​ ಮಾರ್ಕ್​ ಟ್ಯಾಂಕ್​​ಗೆ ಇದೆ. ಇದರ ಜತೆಗೆ ಸ್ಥಳೀಯವಾಗಿ ಅಭಿವೃದ್ಧಿಗೊಂಡಿರುವ ನಾಗ್​ ಟ್ಯಾಂಕ್​ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ಮತ್ತು ಅರುಧ್ರಾ ಮಧ್ಯಮ ವಿದ್ಯುತ್ ರೇಡಾರ್​ ಸ್ವಾಧೀನಕ್ಕೂ ರಕ್ಷಣಾ ಇಲಾಖೆ ಅನುಮತಿ ನೀಡಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!