spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊವ್ಯಾಕ್ಸಿನ್ ಲಸಿಕೆ ರಫ್ತಿಗೆ ಭಾರತ್ ಬಯೋಟೆಕ್‌ಗೆ ಅನುಮತಿ ನೀಡಿದ ಕೇಂದ್ರ

- Advertisement -Nitte

ಹೊಸ ದಿಗಂತ ಡಿಜಿಟಿಲ್‌ ಡೆಸ್ಕ್:‌

ಭಾರತದಲ್ಲಿ ಈಗ  ಕೋವಿಡ್‌ ಲಸಿಕೆಯ ಕೊರತೆ ನೀಗಿದ್ದು, ಈಗಾಗಲೇ ಉತ್ಪಾದನೆಯಾಗಿರುವ 27 ಕೋಟಿ ಡೋಸ್‌ ಲಸಿಕೆ ಬಳಕೆಯಾಗದೇ ಬಾಕಿ ಉಳಿದಿದೆ. ಹೀಗಾಗಿ ಕೋವಿಡ್-19 ಲಸಿಕೆ ಕೊವ್ಯಾಕ್ಸಿನ್‌ ವಿದೇಶಗಳಿಗೆ ರಫ್ತು ಮಾಡಲು ಸೆರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪನಿಗಳಿಗೆ  ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

ದೇಶದಲ್ಲಿ ಈವರೆಗೂ  119.38 ಕೋಟಿ ಡೋಸ್ ಲಸಿಕೆ ಬಳಕೆಯಾಗಿದ್ದುರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ 22.72 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಬಾಕಿ ಉಳಿದಿದೆ.

ಇನ್ನು ಖಾಸಗಿ ಆಸ್ಪತ್ರೆಗಳ ಬಳಿಯೂ 4ರಿಂದ 5 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಬಾಕಿ ಉಳಿದಿದೆ. ದೇಶದಲ್ಲಿ ಒಟ್ಟಾರೆ 26ರಿಂದ 27 ಕೋಟಿ ಕೋವಿಡ್ ಡೋಸ್ ಲಸಿಕೆ ಬಳಕೆಯಾಗದೇ ಬಾಕಿ ಉಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ಏಪ್ರಿಲ್‌ ತಿಂಗಳಿನಿಂದ ಮತ್ತೆ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಲಸಿಕೆ ಅಭಿಯಾನ ವೇಗ ಹೆಚ್ಚಿಸಿದ ಕಾರಣ  ಕೇಂದ್ರ ಸರ್ಕಾರವು ಲಸಿಕೆ ರಫ್ತಿಗೆ ನಿರ್ಬಂಧ ಹೇರಿತ್ತು. ಇದೀಗ ಲಸಿಕೆಯ ರಫ್ತು ನಿಷೇಧ ನಿಯಮವನ್ನು ಸಡಿಲಿಸಿದೆ. ಈ ಮೂಲಕ ಭಾರತವು ಕೊರೋನಾ ಲಸಿಕೆಗಳ ಕೊರತೆ ಅನುಭವಿಸುತ್ತಿದ್ದ ಹಂತದಿಂದ ಲಸಿಕೆಯನ್ನು ರಫ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss